ರಾಯಚೂರಿನ ಮಾವಿನಕೆರೆ ದಂಡೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಕಾರದಿಂದ ಗಾಂ ಜಯಂತಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾೀಶ ಮಾರುತಿ ಬಗಾಡೆ ಮಾತನಾಡಿದರು. ನ್ಯಾಯಾೀಶರಾದ ದಯಾನಂದ ಬೇಲೂರೆ, ಹತ್ತಿಕಾಳು ಪ್ರಭು ಸಿದ್ದಪ್ಪ, ಎಂ.ಜಗದೀಶ್ವರ, ಡಿ.ಸುದೀನಕುಮಾರ, ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಇದ್ದರು. 
ಜಿಲ್ಲೆ

ಮಾವಿನಕೆರೆ ದುಸ್ಥಿತಿ ಬಗ್ಗೆ ಅಸಮಾಧಾನ

ರಾಚಯ್ಯ ಸ್ವಾಮಿ

ರಾಯಚೂರು: ನಗರದ ಮಧ್ಯಭಾಗದಲ್ಲಿರುವ ಮಾವಿನಕೆರೆಯ ದುಸ್ಥಿತಿ ಮತ್ತು ಅತಿಕ್ರಮಣ ಬಗ್ಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾೀಶ ಮಾರುತಿ ಬಗಾಡೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಗಾಂ ಜಯಂತಿ ನಿಮಿತ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ ಮತ್ತು ಜಿಲ್ಲಾಡಳಿತದಿಂದ ಸೋಮವಾರ ಏರ್ಪಡಿಸಿದ್ದ ಮಾವಿನಕೆರೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಜರುಗಿದೆ.
ಮಾವಿನಕೆರೆ ದಂಡೆ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾರುತಿ ಬಗಾಡೆ, ಊರಿನ ಹೊಲಸನ್ನು ತಂದು ಕೆರೆಯಲ್ಲಿ ಸುರಿಯಲಾಗುತ್ತಿದೆ. ಕಸಾಯಿಖಾನೆ, ಚರಂಡಿ ನೀರನ್ನು ಕೆರೆಗೆ ಬಿಡುತ್ತಿರುವುದರಿಂದ ನೀರು ಮಲೀನವಾಗುವಂತಾಗಿದೆ.
ಕೆರೆ ಜಾಗದ ವಿವಾದದ ೈಲ್ ಐದು ವರ್ಷದಿಂದ ನನೆಗುದಿಗೆ ಬಿದ್ದಿದೆ. ವಿವಾದ ಬಗೆಹರಿಸಲಾರದಂತ ವಿಷಯವಲ್ಲ. ಅಕಾರಿಗಳು, ಜನಪ್ರತಿನಿಗಳು ಕುಳಿತು ಚರ್ಚಿಸಿದರೆ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಜತೆಗೆ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ.
ಮುಂದಿನ 15 ದಿನದೊಳಗೆ ಕೆರೆ ಜಾಗವನ್ನು ಸರ್ವೇ ಮಾಡಿಸಿ, ಕೆರೆ ಹದ್ದುಬಸ್ತು ಗುರುತಿಸಬೇಕು. ಜತೆಗೆ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡು ವರದಿಗೆ ನೀಡಿದರೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪೌರಾಯುಕ್ತರಿಗೆ ಮಾರುತಿ ಬಗಾಡೆ ಸೂಚನೆ ನೀಡಿದರು.
ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಗಾಂೀಜಿ ಕನಸಿನ ಸ್ವಚ್ಛ, ಸುಂದರ ಭಾರತ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು. ಜನರ ಸಹಕಾರ ಇಲ್ಲದಿದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಜನರ ಮೇಲೆ ಯಾವುದನ್ನು ಬಲವಂತಾಗಿ ಹೇರಲು ಸಾಧ್ಯವಾಗುವುದಿಲ್ಲ.
ಮಾವಿನಕೆರೆ ಅಭಿವೃದ್ಧಿಯಾಗಬೇಕು ಎನ್ನುವುದು ಎಲ್ಲರ ಆಶಯವಾಗಿದೆ. ಅದಕ್ಕೆ ಜನಪ್ರತಿನಿಗಳು ಬಹಳಷ್ಟು ಬಾರಿ ಪ್ರಯತ್ನ ಪಟ್ಟರು ನಾನಾ ಕಾರಣಗಳಿಂದ ಸಾಧ್ಯವಾಗಿಲ್ಲ. ಕೆರೆ ಅಭಿವೃದ್ಧಿಗೆ ಹಣದ ಕೊರತೆಯಿಲ್ಲ. ಜನರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಕಾರ್ಯಾಂಗ ಮತ್ತು ಶಾಸಕಾಂಗದ ಕಾರ್ಯಗಳಿಗೆ ಜನರು ಸಹಕರಿಸಿದಾಗ ಮಾತ್ರ ಕೆಲಸ, ಕಾರ್ಯಗಳು ಸರಾಗವಾಗಿ ನಡೆಯಲು ಸಾಧ್ಯವಾಗಲಿದೆ. ನಗರ ಮಾತ್ರವಲ್ಲ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜನರು ಕೈಜೋಡಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯಾೀಶರಾದ ದಯಾನಂದ ಬೇಲೂರೆ, ಹತ್ತಿಕಾಳು ಪ್ರಭು ಸಿದ್ದಪ್ಪ, ಎಂ.ಜಗದೀಶ್ವರ, ಡಿ.ಸುದೀನಕುಮಾರ, ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.