ಜಿಲ್ಲೆ

ವಿ.ಸೋಮಣ್ಣ ಜನ್ಮದಿನದ ಹಿನ್ನೆಲೆಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ಹಣ್ಣು ವಿತರಣೆ

ಬೆಂಗಳೂರು: ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ಪ್ರಶಾಂತನಗರದ ರೆಫೆರಲ್ ಆಸ್ಪತ್ರೆಯಲ್ಲಿ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ವಿ.ಸೋಮಣ್ಣ ಅಭಿಮಾನಿ ಬಳಗದ ಪದಾಧಿಕಾರಿಗಳು ಹಣ್ಣು-ಹಂಪಲು ವಿತರಿಸಿದರು.

ಈ ವೇಳೆ ಮಾತನಾಡಿದ ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್, ಜನಸೇವೆಯ ಹಂಬಲವಿರುವ ಸಾಮಾನ್ಯನು ರಾಷ್ಟ್ರಮಟ್ಟದ ನಾಯಕನಾಗಬಹುದು ಎಂಬುದಕ್ಕೆ ವಿ.ಸೋಮಣ್ಣ ನಿದರ್ಶನವಾಗಿದ್ದಾರೆ. ಪಾಲಿಕೆ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ ಸೋಮಣ್ಣ ಶಾಸಕ, ಸಚಿವರಾಗಿ ಕ್ಷೇತ್ರ ಹಾಗೂ ರಾಜ್ಯಾದ್ಯಂತ ಜನೋಪಯೋಗಿ ಕೆಲಸಗಳನ್ನು ಮಾಡಿ ಮಾದರಿಯಾಗಿದ್ದಾರೆ. ಸದ್ಯ ಕೇಂದ್ರ ಸಚಿವರಾಗಿ ರಾಜ್ಯದ ರೈಲ್ವೆ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಚ್. ರವೀಂದ್ರ, ಡಾ. ಚೇತನ, ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ವಿಶ್ವನಾಥಗೌಡ, ಬಿಬಿಎಂಪಿ ಮಾಜಿ ಸದಸ್ಯರಾದ ಆನಂದ್ ಹೊಸೂರು, ದಾಸೇಗೌಡ, ಚನ್ನಪ್ಪ ಆನಂದ್ , ಶ್ರೀಧರ್, ಎಚ್.ರಮೇಶ್, ಸಿ.ಎಂ.ರಾಜಪ್ಪ, ಕನಕಪುರ ರಾಜಣ್ಣ, ಗೋಪಿನಾಥ ರಾಜು, ರಾಮಾಂಜನಿ ಮತ್ತಿತತರರಿದ್ದರು.