ಕಡೂರು: ಶಾಸಕ ಕೆ.ಎಸ್.ಆನಂದ್ ಅವರ 45ನೇ ಜನ್ಮದಿನದ ಪ್ರಯುಕ್ತ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾರ್ವಜನಿಕ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ವಿತರಿಸಿದರು.
ಹಣ್ಣು ವಿತರಣೆ ನಂತರ ಮತಿಘಟ್ಟ ಗ್ರಾಪಂ ಸದಸ್ಯ ಶ್ರೀಕಂಠ ಒಡೆಯರ್ ಮಾತನಾಡಿ, ರೈತ ಕುಟುಂಬದ ಹಾಗೂ ಸರಳ ವ್ಯಕ್ತಿತ್ವದ ಕೆ.ಎಸ್.ಆನಂದ್ ಅವರ ಜನ್ಮದಿನವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಎಂದರು. ವೈದ್ಯಾಧಿಕಾರಿ ಡಾ. ಉಮೇಶ್, ಪ್ರಯೋಗಾಲಯ ಅಧಿಕಾರಿ ಸುರೇಶ್, ಭೋವಿ ಸಮಾಜದ ಅಧ್ಯಕ್ಷ ನಾಗರಾಜ್, ಶಿವು, ಕನ್ನರಾಜು, ಹುಚ್ಚಪ್ಪ, ಜಿಮ್ ಶ್ರೀನಿವಾಸ್, ಕೊನೆಮನೆ ರವಿ, ಯಶ್ವಂತ್ ಇತರರಿದ್ದರು.