ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ಕುಡಿಬೈಲು ಕುಚ್ಚೂರು ಸಂಸ್ಥಾಪನ ದಿನದ ಅಂಗವಾಗಿ ಮಂಗಳವಾರ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶ್ರೀಕೃಷ್ಣ ಸೇವಾ ಆಶ್ರಮದಲ್ಲಿ ಹಣ್ಣು ವಿತರಣೆ ನಡೆಯಿತು 
ಜಿಲ್ಲೆ

ಸಾಮಾಜಿಕ ಚಿಂತನೆಯೊಂದಿಗೆ ಸಂಸ್ಥೆ ಯಶಸ್ಸು

ಇಂದಿರಾ ಎನ್ ಕೆ

ಹೆಬ್ರಿ: ಒಳ್ಳೆಯ ಸಾಮಾಜಿಕ ಚಿಂತನೆಯೊಂದಿಗೆ ಆರಂಭ ಮಾಡಿದ ಸಂಸ್ಥೆ ಯಶಸ್ಸು ಕಾಣಲಿ ಎಂದು ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಮುಖ್ಯಸ್ಥೆ ಡಾ.ಭಾರ್ಗವಿ ಆರ್.ಐತಾಳ್ ಹೇಳಿದರು.

ಕುಡಿಬೈಲು ಕುಚ್ಚೂರು ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ಸಂಸ್ಥಾಪನ ದಿನದ ಅಂಗವಾಗಿ ಮಂಗಳವಾರ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಶ್ರೀಕೃಷ್ಣ ಸೇವಾ ಆಶ್ರಮದಲ್ಲಿ ಹಣ್ಣು ವಿತರಣೆಯಲ್ಲಿ ಮಾತನಾಡಿದರು.

ಸಹಕಾರಿ ಅಧ್ಯಕ್ಷ ರಾಜೇಶ್ ಮಾತನಾಡಿ, ಸಂಘದ ಮೂಲಕ ಸೊಸೈಟಿ ಹುಟ್ಟಿಕೊಂಡು, ಸಾಮಾಜಿಕ ಕೆಲಸ ಮಾಡುತ್ತಿದೆ. ಶ್ರೀರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಚಿಂತನೆಯೊಂದಿಗೆ ಹಾಗೂ ಸಹಕಾರದೊಂದಿಗೆ ಅನೇಕ ಕಾರ್ಯಕ್ರಮ ಮಾಡಿರುವುದು ಸಂತಸ ತಂದಿದೆ ಎಂದರು.
ಸಿಇಒ ನರೇಂದ್ರ ಎಸ್., ನಿರ್ದೇಶಕ ದೀಕ್ಷಿತ್ ನಾಯಕ್, ಸಿಬ್ಬಂದಿ ಪ್ರಸನ್ನ, ಸದಸ್ಯ ನಾಗರಾಜು ಇದ್ದರು.