ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ತೋಟಗಾರಿಕೆ ಬೆಳೆಗಳ ಪೈಕಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಮಾವಿನ ಸಲನ್ನು ಸಂರಕ್ಷಿಸಲು ಪ್ರೂಟ್‌ಬ್ಯಾಗ್ ತಂತ್ರ ಅನುಸರಿಸುವವರ ಸಂಖ್ಯೆ ಹೆಚ್ಚಿದೆ. ಹಮಾಮಾನ ವೈಪರಿತ್ಯ, ಮಳೆ ಕೊರತೆ, ಅತೀಯಾದ ಬಿಸಿಲು, ವಿವಿಧ ಬಗೆಯ ಕೀಟಬಾಧೆ ಮತ್ತಿತರ ಕಾರಣಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿರುವ ಮಾವಿನ ಸಲನ್ನು ಜೋಪಾನ ಮಾಡಲು ಈ ತಂತ್ರ ಹೆಚ್ಚು ಯಶಸ್ವಿಯಾಗಿದೆ.
ಹವಾಮಾನ ವೈಪರಿತ್ಯದಿಂದಾಗಿ ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರಬೇಕಿದ್ದ ಮಾವು ಮೇ ತಿಂಗಳಲ್ಲಿ ಕಟಾವಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಮಾವಿನ ಸಲಿನ ರಕ್ಷಣೆ ಹೆಚ್ಚು ಅವಶ್ಯಕವಾಗಿದೆ. ಜಿಲ್ಲಾ ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಾವು ಬೆಳೆಗಾರರು ಪ್ರೂಟ್‌ಬ್ಯಾಗ್ ತಂತ್ರದ ಮೊರೆ ಹೋಗಿದ್ದು ನಷ್ಟ ಪ್ರಮಾಣ ತಗ್ಗಿಸುವುದಲ್ಲಿ ಇದು ಬಹಳಷ್ಟು ಸಹಕಾರಿಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಮಾವು ಬಲಿಯುವ ವೇಳೆ ತಂತ್ರ: ವರ್ಷದಿಂದ ವರ್ಷಕ್ಕೆ ಮಾವಿನ ಸಲಿನಲ್ಲಿ ಹೊಡೆತ ತಿನ್ನುತ್ತಿರುವ ಮಾವು ಬೆಳೆಗಾರರು ಈ ಬಾರಿ ಎಚ್ಚರಿಕೆ ವಹಿಸಿದ್ದಾರೆ. ಬಿಸಿಲಿನ ತಾಪಕ್ಕೆ ಉದುರುತ್ತಿರುವ ಮಾವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರೈತರು ಪ್ರೊಟ್ ಬ್ಯಾಗ್ ರಕ್ಷಣೆಯ ಮೊರೆ ಹೋಗಿದ್ದಾರೆ. ಮಾವಿನ ತೋಟದಲ್ಲಿ ಮಾವಿನ ಕಾಯಿ ಬಲಿಯುವ ವೇಳೆಗೆ ಬ್ಯಾಗ್ ರೀತಿಯಲ್ಲಿನ ಚೀಲವನ್ನು ಕಟ್ಟುವ ಮೂಲಕ ಬಿಸಿಲ ತಾಪ, ಕೀಟ ಹಾಗೂ ಪಕ್ಷಿಗಳ ದಾಳಿಯಿಂದ ಸಲನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ.
ಮಾವಿನ ಚೀಲದ ಬಳಕೆಯ ಪ್ರಯೋಜವೇನು? ಪ್ರೂಟ್‌ಬ್ಯಾಗ್ ಬಳಕೆಯಿಂದ ಉತ್ತಮ ಇಳುವರಿ ಪಡೆಯಬಹುದು. ಉತ್ತಮ ಗಾತ್ರದ ಹಣ್ಣನ್ನು ದಕ್ಕಿಸಿಕೊಳ್ಳಬಹುದು, ಸೊಳ್ಳೆಗಳು, ಇರುವೆ ಮತ್ತು ಇತರ ಕೃಷಿ ಕೀಟಗಳಿಂದ ಬರುವ ಎಲ್ಲ ಬಗೆಯ ಕೀಟಬಾಧೆಯಿಂದ ಹಣ್ಣನ್ನು ರಕ್ಷಿಸಬಹುದು. ಪಕ್ಷಿಗಳು, ಮಂಗಗಳು ಮತ್ತು ಇತರ ಪ್ರಾಣಿಗಳ ದಾಳಿಯಿಂದ ರಕ್ಷಣೆ ಪಡೆಯಬಹುದು, ಮಾಲಿನ್ಯ, ರಾಸಾಯನಿಕ ಸಿಂಪಡಣೆಗಳು, ರಸಗೊಬ್ಬರಗಳು, ಮಳೆ, ಸೂರ್ಯನ ಬೆಳಕು ಮತ್ತು ಗಾಳಿಯಿಂದ ರಕ್ಷಣೆ ನೀಡುತ್ತದೆ.ಮಾವಿನ ಹಣ್ಣು ಮರದಿಂದ ಭೂಮಿಗೆ ಬಿದ್ದು ಹಾನಿಗೊಳಗಾಗದಂತೆ ರಕ್ಷಿಸುತ್ತದೆ. ಮಾವಿನ ಹಣ್ಣು ಮಾಗಿದ ಬಣ್ಣದೊಂದಿಗೆ ಪಕ್ವವಾಗಲು ಸಹಾಯ ಮಾಡುತ್ತದೆ ಮತ್ತು ಯಾವುದೇ ಕಪ್ಪು ಗುರುತುಗಳು ಮತ್ತು ಹಾನಿಯಾಗಲು ಬಿಡುವುದಿಲ್ಲ, ಮಾವಿನ ರಕ್ಷಣಾ ಚೀಲಗಳು ನೀರು ನಿರೋಧಕವಾಗಿದ್ದು ಮಳೆಯನ್ನು ಸುಲಭವಾಗಿ ತಡೆದುಕೊಳ್ಳಬಲ್ಲವು.
ಉತ್ತಮ ದರ ಲಭ್ಯ: ಮಾವಿನ ತೋಟದಲ್ಲಿ ಮಾವಿನ ಕಾಯಿ ಬಲಿಯುವ ವೇಳೆಗೆ ಬ್ಯಾಗ್ ರೀತಿಯಲ್ಲಿನ ಚೀಲವನ್ನು ಪ್ರತಿ ಒಂದೊಂದು ಮಾವಿಗೂ ತೊಟ್ಟಿನ ಸಹಿತ ಕಟ್ಟುವ ಮೂಲಕ ತಾಪಮಾನ ರಕ್ಷಣೆ, ನೋಣ ಮತ್ತು ಕೀಟಗಳಿಂದ ರಕ್ಷಣೆ ಮಾಡಲಾಗುತ್ತದೆ, ಮಾರುಕಟ್ಟೆಗಳಲ್ಲಿ ಇತರೆ ಮಾವಿನ ಸಲಿಗಿಂತಲೂ ಉತ್ತಮವಾಗಿ ಕಂಡುಬರುತ್ತದೆ. ಉತ್ತಮ ದರ ಸಿಗುತ್ತದೆ. ಇಂಥ ಹಣ್ಣುಗಳು ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೆಚ್ಚು ರಪ್ತಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸಕೋಟೆಯಲ್ಲಿ ಹೆಚ್ಚು ಬೆಳೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 5871ಹೆಕ್ಟರ್ ಪ್ರದೇಶದಷ್ಟು ಮಾವಿನ ವ್ಯಾಪ್ತಿ ಇದೆ. ದೇವನಹಳ್ಳಿ ತಾಲೂಕಿನಲ್ಲಿ 938 ಹೆಕ್ಟೇರ್, ಹೊಸಕೋಟೆ 2131 ಹೆಕ್ಟೇರ್, ನೆಲಮಂಗಲ 1636 ಹೆಕ್ಟೇರ್ ಹಾಗೂ ದೊಡ್ಡಬಳ್ಳಾಪುರ 1166 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಹೊಸಕೋಟೆ ತಾಲೂಕಿನಲ್ಲಿ ಹೆಚ್ಚು ಮಾವು ಕಂಡುಬರುತ್ತಿದೆ.
ತಲಾ 1 ರೂ.ಖರ್ಚು: ಪ್ರೂಟ್ ಬ್ಯಾಗ್ ಪ್ರಯೋಗ ತುಸು ಕಷ್ಟದಾಯದ ಕೆಲಸವಾದರೂ ಲಿತಾಂಶ ಉತ್ತಮವಾಗಿರುತ್ತದೆ. ಪ್ರತಿ ಕಾಯಿಗೂ ಇಂಥ ಬ್ಯಾಗ್ ಕಟ್ಟಲು ಏನಿಲ್ಲವೆಂದರೂ ತಲಾ 1 ರೂಪಾಯಿ ಖರ್ಚು ಬರುತ್ತದೆ. ಇದಕ್ಕೆ ತೋಟಗಾರಿಕೆ ಇಲಾಖೆಯಿಂದ ಶೇ.40 ಸಬ್ಸಿಡಿಯೂ ದೊರಕುತ್ತದೆ. ಜಿಲ್ಲಾ ತೋಟಗಾರಿಕೆ ಇಲಾಖೆ ಹೆಚ್ಚೆಚ್ಚು ಪ್ರಚಾರ ಮಾಡುತ್ತಿದ್ದು ಸೌಲಭ್ಯ ಸದ್ಭಳಕೆ ಮಾಡಿಕೊಳ್ಳುವಂತೆ ರೈತರಿಗೆ ಮನವಿ ಮಾಡುತ್ತಿದೆ. ಜಿಲ್ಲೆಯಲ್ಲಿ ಮಲ್ಲಿಕಾ, ಸೆಂಧೂರ, ರಸಪೂರಿ, ತೋತಾಪುರಿ ಪ್ರಮುಖ ತಳಿಗಳಾಗಿದ್ದು, ಮಲ್ಲಿಕಾ ತಳಿಯ ಮಾವು ಹೆಚ್ಚು ಬೆಳೆಯಲಾಗುತ್ತಿದೆ.
ಪ್ರೊಟ್‌ಬ್ಯಾಗ್ ತಂತ್ರ ಬಳಸುವುದರಿಂದ ಅನೇಕ ಪ್ರಯೋಜನಗಳಿವೆ, ಇದು ಮಾವು ಬೆಳೆಗಾರರಿಗೆ ವರದಾನವಾಗಿದೆ. ಈ ಮೊದಲಿಗೆ ಕೋಲಾರ ಭಾಗದಲ್ಲಿ ಇಂಥ ತಂತ್ರ ಹೆಚ್ಚು ಬಳಕೆಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿಯೂ ಕಂಡುಬರುತ್ತಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ವತಿಯಿಂದ ಬೆಳೆಗಾರರಿಗೆ ಸಾಕಷ್ಟು ಮಾಹಿತಿ ಮಾರ್ಗದರ್ಶನ ಹಾಗೂ ಸಹಕಾರ ನೀಡಲಾಗುತ್ತಿದೆ. ಪ್ರೂಟ್‌ಬ್ಯಾಗ್ ಬಳಸಿದ ಹಣ್ಣುಗಳಿಗೆ ಮಾರುಕಟ್ಟೆಗಳಲ್ಲಿ ಉತ್ತಮ ದರ ಸಿಗಲಿದೆ.
ಗುಣವಂತ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಬೆಂ.ಗ್ರಾಮಾಂತರ