ಕಂಪ್ಲಿಯ ಗುರುಮಠದಲ್ಲಿ ಏರ್ಪಡಿಸಿದ್ದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಶರಣಯ್ಯ ಚರಂತಿಮಠ ಮಾತನಾಡಿದರು. ಪ್ರಮುಖರಾದ ಶಿವಪುತ್ರಪ್ಪ ನವಲಿ, ಡಾ.ಮೃತ್ಯುಂಜಯ ರುಮಾಲೆ, ಗೊಗ್ಗ ಚನ್ನಬಸವರಾಜ ಇದ್ದರು. 
ಜಿಲ್ಲೆ

ಕಾಯಕದಿಂದ ಆಲಸ್ಯ, ದಾರಿದ್ರ್ಯ ದೂರ

ಕಂಪ್ಲಿ: ಇಲ್ಲಿನ ಗುರುಮಠದಲ್ಲಿ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಿಂದ ಲಿಂ.ಗೊಗ್ಗ ವಿಶಾಲಾಕ್ಷಮ್ಮನವರ ಸ್ಮರಣಾರ್ಥ 239ನೇ ಹುಣ್ಣಿಮೆ ಕಾರ್ಯಕ್ರಮ ಭಾನುವಾರ ನಡೆಯಿತು.

ಹೊಸಪೇಟೆ ರಾಣಿ ಚನ್ನಮ್ಮ ಪ್ರೌಢಶಾಲೆ ಮುಖ್ಯಶಿಕ್ಷಕ ಶರಣಯ್ಯ ಚರಂತಿಮಠ ಮಾತನಾಡಿ, ಸತ್ಯ, ಶುದ್ಧ, ಪ್ರಾಮಾಣಿಕತೆ ಕಾಯಕದಲ್ಲಿ ಅಡಗಿರಬೇಕು. ಕಾಯಕದಿಂದ ವೈಯಕ್ತಿಕ ಅಭಿವೃದ್ಧಿಯೊಂದಿಗೆ ದೇಶದ ಪ್ರಗತಿ ಸಾಧ್ಯ. ಸೋಮಾರಿತನ, ಆಲಸ್ಯ, ದಾರಿದ್ರ್ಯ ದೂರವಾಗಿ ದೇಶ ಪ್ರಗತಿಪಥದಲ್ಲಿ ಸಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕೊರತೆಯಿಂದಾಗಿ ಸಭ್ಯತೆ, ಸಂಸ್ಕೃತಿ ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಿವೃತ್ತ ಸಹಾಯಕ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಮಾತನಾಡಿದರು. ಹೊಸಪೇಟೆಯ ವೀರಶೈವ ಸಮಾಜದ ಪ್ರಮುಖ ಶಿವಪುತ್ರಪ್ಪ ನವಲಿ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ಗೊಗ್ಗ ಚನ್ನಬಸವರಾಜ, ಗೊಗ್ಗ ಕಾರ್ತಿಕ್, ಗೊಗ್ಗ ಶೋಭಾ, ಬೂದಗುಂಪಿ ಹುಸೇನ್‌ಸಾಬ್, ಎಚ್.ಎಂ.ಜಗದೀಶ, ಕೆ.ಎಂ.ಚಂದ್ರಶೇಖರಸ್ವಾಮಿ, ಯೋಗರಾಜ, ಸಿದ್ದರಾಮಯ್ಯ, ಕಲ್ಗುಡಿ ಬಸಂತಮ್ಮ, ವಾಲಿ ಶಕುಂತಲಾ ಇದ್ದರು.