ಅಳವಂಡಿ ಸಮೀಪದ ಕವಲೂರು ಸೋಲಾರ್ ಕಂಪನಿಯಲ್ಲಿ ನೇಮಿಸಿಕೊಂಡ ಸ್ಥಳೀಯರನ್ನು ಉದ್ಯೋಗದಿಂದ ಕೈಬಿಡದಂತೆ ಆಗ್ರಹಿಸಿ ವಿವಿಧ ಗ್ರಾಮಗಳ ನಿವಾಸಿಗಳು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಹನುಮಂತ ಎಲಿಗಾರ, ಕರಿಯಪ್ಪ ಎಮ್ಮಿ, ಹನುಮಂತ ಕೊರ್ಲಗಟ್ಟಿ, ಶ್ರೀನಿವಾಸ ಮುಂಡರಗಿ, ವೆಂಕಟೇಶ, ಬಾಬುಜಾನ್, ರವಿಪ್ರಸಾದ್, ಪ್ರಭು, ಗವಿಸಿದ್ದಪ್ಪ, ಕೀರ್ತಿ, ಕುಮಾರ ಇತರರು ಇದ್ದರು. 
ಜಿಲ್ಲೆ

ಕೆಲಸದಿಂದ ವಜಾ ಮಾಡಿದೆ ಮುಂದುವರಿಸಿ

ರುದ್ರಪ್ಪ ವಾಲಿ

ಅಳವಂಡಿ: ಕೆಲಸದಿಂದ ವಜಾ ಮಾಡದಂತೆ ಆಗ್ರಹಿಸಿ ಅಳವಂಡಿ ಸುತ್ತಿನ ಗ್ರಾಮಸ್ಥರು ಸಮೀಪದ ಕವಲೂರು ಸೋಲಾರ್ ಕಂಪನಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

ಕವಲೂರಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೋಲಾರ್ ಕಂಪನಿಯ ವಿದ್ಯುತ್ ಘಟಕದಲ್ಲಿ ಸುತ್ತಲಿನ ಗ್ರಾಮಗಳ ನೂರಾರು ಕಾರ್ಮಿಕರು 11 ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ ಆಡಳಿತ ಮಂಡಳಿ ಮಳೆಗಾಲ ಇರುವುದರಿಂದ ಕೆಲಸದ ಕಾರ್ಯಭಾರ ಕಡಿಮೆ ಇದ್ದು, 30 ಜನ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದಾಗಿ ತಿಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡರಾದ ಮುತ್ತಣ್ಣ ಬಿಸರಳ್ಳಿ, ನಾಗರಾಜ ಕಗ್ಗಲ್ ಮಾತನಾಡಿ, ಸೋಲಾರ್ ಕಂಪನಿಯವರು ವಿದ್ಯುತ್ ಉತ್ಪಾದನೆಗೆ ಗ್ರಾಮದ ಸಾವಿರಾರು ಎಕರೆ ಜಮೀನನ್ನು ಪಡೆದಿದ್ದಾರೆ. ಆದರೆ ಕೆಲಸ ಕಡಿಮೆ ಇದೆ ಎಂದು 30 ಯುವಕರಿಗೆ ಕೆಲಸ ಬಿಡುವಂತೆ ತಿಳಿಸಿದ್ದಾರೆ. ಇದು ತುಂಬಾ ಅನ್ಯಾಯ. ಭೂಮಿ ನೀಡಿದ ಗ್ರಾಮದ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.