ಬೆಂಡವಾಡ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮಶಾಖೆ ಉದ್ಘಾಟಿಸಲಾಯಿತು. ಎನ್.ಶಂಕರ, ಅಪ್ಪಾಸಾಬ ಬಾನೆ, ಸಿದ್ಧರಾಮ ಪೂಜೇರಿ, ಸುರೇಶ ಚೌಗಲಾ, ಲಕ್ಕಪ್ಪ ಪೂಜೇರಿ ಇತರರಿದ್ದರು. 
ಜಿಲ್ಲೆ

ಹಳ್ಳಿ-ಹಳ್ಳಿಗೆ ಡಾ.ಅಂಬೇಡ್ಕರ್ ವಿಚಾರ ಮುಟ್ಟಿಸಲಿ

ಹಂದಿಗುಂದ: ಡಾ.ಬಿ.ಆರ್. ಅಂಬೇಡ್ಕರ್ ವಿಚಾರಗಳನ್ನು ಹಳ್ಳಿ ಹಳ್ಳಿಗೆ ಮುಟ್ಟಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ಅಧ್ಯಕ್ಷ ಎನ್.ಶಂಕರ ಹೇಳಿದರು.

ಸಮೀಪದ ಬೆಂಡವಾಡ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಭಜನಾ ಮಂಡಳ ಹಾಗೂ ಶ್ರೀ ಬಸವೇಶ್ವರ ಕೃಷ್ಣ ಪಾರಿಜಾತ ಕಲಾಸಂಘ ಮಾವಿನಹೊಂಡ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮಶಾಖೆ ಉದ್ಘಾಟಿಸಿ, ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಅನಿತಾ ದುಪದಾಳೆ, ಗ್ರಾಪಂ ಮಾಜಿ ಅಧ್ಯಕ್ಷ ಅಪ್ಪಾಸಾಬ ಬಾನೆ, ಗ್ರಾಪಂ ಸದಸ್ಯ ಸಿದ್ಧರಾಮ ಪೂಜೇರಿ, ಸುರೇಶ ಚೌಗಲಾ, ಲಕ್ಕಪ್ಪ ಪೂಜೇರಿ, ಸಂಘಟನೆ ಜಿಲ್ಲಾ ಸಂಚಾಲಕ ಡಿ.ಬಿ.ಮಗದೂರ, ಡಿಎಸ್‌ಎಸ್ ತಾಲೂಕು ಘಟಕದ ಅಧ್ಯಕ್ಷ ಅಶೋಕ ಜಗನ್ನಾಥ, ಕಲಾವಿದ ಮಂಜು ಪೂಜೇರಿ, ಗ್ರಾಪಂ ಉಪಾಧ್ಯಕ್ಷ ಕುಮಾರ ಸಾರಾಪುರ ಇತರರಿದ್ದರು.