ಹಾರೂಗೇರಿ: ಗ್ರಾಮೀಣ ಭಾಗದ ಬಡಜನರ ಆರ್ಥಿಕ ವ್ಯವಸ್ಥೆ ಸುಧಾರಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನೆಗಳು ಪೂರಕವಾಗಿವೆ ಎಂದು ಗದಗಿನ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ನಿರ್ದೇಶಕ ಸಂಜಯ ನಾಡಗೌಡ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಕ್ಷೇತ್ರಗಳಿಗೆ ಧರ್ಮಸ್ಥಳ ಸಂಸ್ಥೆ ಕೊಡುಗೆ ಅಪಾರವಾಗಿದೆ ಎಂದರು. ಬ್ಯಾಂಕ್ ವ್ಯವಸ್ಥಾಪಕ ಭೀಮಾಶಂಕರ ಮಾತನಾಡಿ, ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕ್‌ಗಳು ನೀಡಿದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ನಿರ್ದೇಶಕ ನಾಗರತ್ನ ಹೆಗಡೆ, ಪ್ರಾಚಾರ್ಯ ಲಕ್ಷ್ಮಣ ಪಾಟೀಲ, ಯೋಜನಾಧಿಕಾರಿ ಮೋಹನ ಕೆ, ಮಾತನಾಡಿದರು. ಜಿಲ್ಲಾ ಜನಜಾಗತಿ ವೇದಿಕೆ ಸದಸ್ಯ ದುಂಡಪ್ಪ ಅಸ್ಕಿ, ಯೋಜನಾಧಿಕಾರಿ ನಿಂಗಪ್ಪ, ಹನುಮಂತ ಕುರಿ ಇತರರಿದ್ದರು.