ಬೆಳಗಾವಿ ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪವರ್‌ಮನ್‌ಗಳ ಸಮಗ್ರ ತರಬೇತಿ ಕಾರ್ಯಕ್ರಮದಲ್ಲಿ ಡಾ.ಅಲ್ಲಮಪ್ರಭು ಸ್ವಾಮೀಜಿ, ಲೋಕೇಶ ಕೆ.ಎಲ್., ಡಾ.ಎಫ್.ವಿ.ಮಾನ್ವಿ, ಡಾ.ಬಿ.ಆರ್.ಪಟಗುಂದಿ, ನಿರುಪಮಾ, ದೀಪಕ ಧನಪಾಲ ಇತರರಿದ್ದರು. 
ಜಿಲ್ಲೆ

ತರಬೇತಿಯಿಂದ ಪವರ್‌ಮನ್ ಕೌಶಲ ವೃದ್ಧಿ

ಬೆಳಗಾವಿ: ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪವರ್‌ಮನ್‌ಗಳಿಗೆ ಮೌಲ್ಯಯುತ ಕೌಶಲ ತರಬೇತಿ ನೀಡುತ್ತಿರುವ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ, ಎಸ್‌ಜಿಬಿಐಟಿ ಮತ್ತು ಹೆಸ್ಕಾಂ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ನಗರದ ನಾಗನೂರ ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು. ನಗರದ ಎಸ್‌ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ ಹೆಸ್ಕಾಂ ಸಹಯೋಗದೊಂದಿಗೆ ಪವರ್‌ಮನ್‌ಗಳಿಗೆ ಏರ್ಪಡಿಸಿದ್ದ ಮೂರು ದಿನಗಳ ಸಮಗ್ರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಸ್ಕಾಂ ಮುಖ್ಯ ಅಭಿಯಂತ ಲೋಕೇಶ ಕೆ.ಎಲ್. ಮಾತನಾಡಿ, ನಿರಂತರ ವಿದ್ಯುತ್ ಸರಬರಾಜು ಮಾಡುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪವರ್‌ಮನ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಹೆಸ್ಕಾಂನ ಕ್ಷೇತ್ರ ಕಾರ್ಯಾಚರಣೆ ಸೈನಿಕರು ಎಂದು ಬಣ್ಣಿಸಿದರು. ಡಾ.ಎಫ್.ವಿ.ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಬಿ.ಆರ್.ಪಟಗುಂದಿ, ಎಇಇ ನಿರುಪಮಾ, ಡಾ.ಸುಪನ್ನ ಶಿರಗುಪ್ಪೆ, ಪ್ರೊ.ಬಿ.ಎಸ್.ಹೂಗಾರ, ದೀಪಕ ಧನಪಾಲ, ಪ್ರವೀಣಕುಮಾರ ಚಿಕಡೆ, ಶಿವಾಜಿ ಖಾರೆ ಇತರರಿದ್ದರು.