ಹಾರೂಗೇರಿ ಪಟ್ಟಣದಲ್ಲಿ ಶರಣ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಐ.ಆರ್. ಮಠಪತಿ ಬಿಡುಗಡೆಗೊಳಿಸಿದರು. ಡಾ. ಸಿ.ಆರ್. ಗುಡಸಿ, ಎಸ್.ಎಲ್. ಬಾಡಗಿ, ಬಸವರಾಜ ಹೊಸಪೇಟಿ, ಬಿ.ವಿ. ಬಿರಾದಾರ ಇತರರಿದ್ದರು. 
ಜಿಲ್ಲೆ

ನಾಳೆಯಿಂದ ಶರಣ ಸಂಸ್ಕೃತಿ ಉತ್ಸವ

ಹಾರೂಗೇರಿ: ಪಟ್ಟಣದ ಬಡ ಬ್ಯಾಕೂಡ ರಸ್ತೆಯಲ್ಲಿರುವ ನಿಶ್ಚಿತ ನೆಲೆ ನಿಲಯದ ಆವರಣದಲ್ಲಿ ಶರಣ ವಿಚಾರವಾಹಿನಿ ವತಿಯಿಂದ ಡಿ.14ರಿಂದ 25ರ ವರೆಗ 34ನೇ ವಾರ್ಷಿಕೋತ್ಸವ, ಕರ್ನಾಟಕ ಸುವರ್ಣ ಸಂಭ್ರಮ, ಶರಣ ಸಂಸ್ಕೃತಿ ಉತ್ಸವ, ವಿಶ್ವಧರ್ಮ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್. ಮಠಪತಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿದಿನ ಸಂಜೆ 6.30ರಿಂದ 08 ಗಂಟೆವೆರೆಗೆ ಬೈಲೂರು ನಿಷ್ಕಲಮಂಟಪದ ನಿಜಗುಣಪ್ರಭು ಸ್ವಾಮೀಜಿ ಅವರಿಂದ ಪ್ರವಚನ ಜರುಗಲಿದೆ ಎಂದರು.

ಡಾ. ಸಿ.ಆರ್. ಗುಡಸಿ, ಎಸ್.ಎಲ್. ಬಾಡಗಿ, ಬಸವರಾಜ ಹೊಸಪೇಟೆ, ಬಿ.ವಿ. ಬಿರಾದಾರ, ಡಾ. ಕಿರಣ ಹಿಟ್ಟಣಗಿ, ಈರಪ್ಪ ಲುಡಬುಡೆ, ಸುರೇಶ ಕುರಿ, ಅನಸೂಯಾ ಮುಳವಾಡ, ಆಶಾ ಹೊನವಾಡೆ, ಮಹಾದೇವಿ ಪಾಟೀಲ ಇತರರಿದ್ದರು.