ಮುನವಳ್ಳಿ : ಪಟ್ಟಣದ ಆರಾಧ್ಯದೆವ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವ ೆ.27 ರಿಂದ ಮಾ. 3ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
27ರಂದು ಮಹಾರುದ್ರಾಭಿಷೇಕ, ಮಧ್ಯಾಹ್ನ 3 ಗಂಟೆಗೆ ವ್ಯಾಸ ಮಹರ್ಷಿಗಳ ತೋಳು ಪೂಜೆ, ಪುರವಂತರ ಒಡುಪು, ಸಂಜೆ ಸೋಮಶೇಖರಮಠದ ಮುರುಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವ, ರಾತ್ರಿ ರೆತ ನಕ್ಕರೆ ಜಗವೆಲ್ಲ ಸಕ್ಕರೆ ನಾಟಕ ಪ್ರದರ್ಶನಗೊಳ್ಳುವುದು.
28ರಂದು ತೆರೆಬಂಡಿ ಸ್ಪರ್ಧೆ, ವಲಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆ, ಜಾನಪದ ಸಮೂಹ ನತ್ಯ ಸ್ಪರ್ಧೆ, ರಾತ್ರಿ ದೇವಮಾನವ ನಾಟಕ ಪ್ರದರ್ಶನವಾಗಲಿದೆ. ಮಾ.1ರಂದು ನಿಮಿಷದ ಟ್ರ್ಯಾಕ್ಟರ್ ಜಿಗ್ಜಾಗ್ ಸ್ಪರ್ಧೆ, ಸಂಜೆ 4ಕ್ಕೆ ರಾಜ್ಯಮಟ್ಟದ ಆಹ್ವಾನಿತ ಪುರುಷರ ಖೋ&ಖೋ, 6ಕ್ಕೆ ನತ್ಯ ತಂಡಗಳಿಂದ ಡಾನ್ಸ್ ರಾಜಾ ಡಾನ್ಸ್ ಕಾರ್ಯಕ್ರಮವಿದೆ.
ಮಾ.2ರಂದು ಬೆಳಗ್ಗೆ ಮಹಿಳೆಯರಿಗೆ ವಿವಿಧ ಸ್ಪರ್ಧೆ, 11ಕ್ಕೆ ಟ್ರ್ಯಾಕ್ಟರ ಇಂಜಿನ್ ಜಗ್ಗುವ ಸ್ಪರ್ಧೆ, ಸಂಜೆ 6ಕ್ಕೆ ನಮ್ಮಮ್ಮ ಸೂಪರಸ್ಟಾರ್ ಗೇಮ್ ಶೋ ಜರುಗುವುದು. ಮಾ. 3ರಂದು ಬೆಳಗ್ಗೆ ಓಟದ ಸ್ಪರ್ಧೆ, ಜಾನವಾರು ಪ್ರದರ್ಶನ, ಪ್ರತಿದಿನ ಬಯಲು ಕುಸ್ತಿಗಳು ಜರುಗುವವು ಎಂದು ಜಾತ್ರಾ ಕಮಿಟಿ ಅಧ್ಯ ಅಂಬರೀಷ ಯಲಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.