ನೇಸರಗಿ: ಸ್ಥಳಿಯ ದುರ್ಗಾದೇವಿ ಎಂಟನೆಯ ಜಾತ್ರಾ ಮಹೋತ್ಸವ ಮೇ 19ರಿಂದ 23ರ ವರೆಗೆ ಜರುಗಲಿದೆ. 19ರಂದು ಕುಂಭಮೇಳ, ಗ್ರಾಮದ ದೇವಸ್ಥಾನಗಳಲ್ಲಿ ಉಡಿತುಂಬುವುದು, ನಂತರ ಮಹಾಪ್ರಸಾದ ಹಾಗೂ ರಾತ್ರಿ 10 ಗಂಟೆಗೆ ಚೌಡಕಿ ಪದಗಳು ಜರುಗುವವು. 20ರಂದು ಬೆಳಗ್ಗೆ ದುರ್ಗಾದೇವಿ ಆಗಮನ, ಬಸ್ ನಿಲ್ದಾಣದ ಬನ್ನಿಗಿಡಕ್ಕೆ ಪೂಜೆ ಸಲ್ಲಿಸಿ ದೇವಿಯ ಹೊನ್ನಾಟ ಪ್ರಾರಂಭವಾಗಲಿದೆ. ಸಂಜೆ 6 ಗಂಟೆಗೆ ದೇವಿಯ ಟಸ್ಥಾಪನೆಗೊಂಡು ಉಡಿ ತುಂಬುವುದು. ರಾತ್ರಿ 9 ಗಂಟಗೆ ಭಜನಾ ಕಾರ್ಯಕ್ರಮ ಜರುಗುವುದು. 21ರಂದು ರಾತ್ರಿ 9 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಜಾನಪದ ಕಾರ್ಯಕ್ರಮ ಜರುಗುವುದು. 22ರಂದು ರಾತ್ರಿ 8 ಗಂಟೆಗೆ ವಿದ್ಯಾಮಂದಿರ ಹೆಸ್ಕೂಲ್ ಆವರಣದಲ್ಲಿ ರಸಮಂಜರಿ, ನಗೆಹಬ್ಬ, ನತ್ಯ ಕಾರ್ಯಕ್ರಮ, 23ರಂದು ಭಕ್ತರಿಗೆ ಪ್ರಸಾದ ಹಾಗೂ ರಾತ್ರಿ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ, ಬಯಲಾಟ ಅಕಾಡೆಮಿ ಪುರಸತ ಭರಮಣ್ಣ ಸತ್ಯೆಣ್ಣವರ ನೇತತ್ವದಲ್ಲಿ ರಾತ್ರಿ 8 ಗಂಟೆಗೆ ರಾಧಾ ಕಷ್ಣ ಬಯಲಾಟ ವಿದ್ಯಾಮಂದಿರ ಹೆಸ್ಕೂಲ್ ಆವರಣದಲ್ಲಿ ಜರುಗುವುದು ಎಂದು ದುರ್ಗಾದೇವಿ ಜಾತ್ರಾ ಕಮಿಟಿಯ ರಮೇಶ ರಾಯಪ್ಪಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.