ಜಿಲ್ಲೆ

ಇಂದಿನಿಂದ ಅಪ್ಪಯ್ಯ ಸ್ವಾಮೀಜಿ ಜಾತ್ರೋತ್ಸವ

ರಾಘವೇಂದ್ರಗೌಡ ಭೀ ಪಾಟೀಲ್

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಧಡಕೆ ತೋಟದ ವಸತಿ ಪ್ರದೇಶದ ಅಪ್ಪಯ್ಯಸ್ವಾಮೀಜಿ ಜಾತ್ರಾ ಮಹೋತ್ಸವವು ಮೇ 12ರಿಂದ 14ರ ವರೆಗೆ ತುಬಚಿಯ ಡಾ. ಅಲ್ಲಮಪ್ರಭು ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜರುಗಲಿದೆ.

12ರಂದು ಬೆಳೆಗ್ಗೆ ಕಷ್ಣಾನದಿ ಜಲ ತರುವುದು. ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆಯೊಂದಿಗೆ ಸಹಸ್ರ ನಾಮಾವಳಿ, ಭಜನೆ, ಸಂಬಾಳ ವಾದನದೊಂದಿಗೆ ಕರಿಸಿದ್ಧೇಶ್ವವರ ಪಲ್ಲಕ್ಕಿ ಉತ್ಸವ, ಕರಡಿ ಮಜಲು ಜರುಗಲಿದೆ. 12ರಿಂದ ಚಂದ್ರಾಮ ಕಲ್ಲು, ಚೀಲ, ಗುಂಡು ಎತ್ತುವುದು, ಎತ್ತಿನಗಾಡಿ ಹಾರಿ ಎತ್ತುವ ಪ್ರದರ್ಶನ ನಡೆಯಲಿವೆ.

ಸಂಜೆ 6 ಗಂಟೆಗೆ ರಥೋತ್ಸವ, ರಾತ್ರಿ 10 ಗಂಟೆಗೆ ಹುಚ್ಚ ಹಚ್ಚಿದ ಕಿಚ್ಚು ನಾಟಕ ಪ್ರದರ್ಶನಗೊಳ್ಳಲಿದೆ. 13ರಂದು ಬೆಳಗ್ಗೆ ಅಪ್ಪಯ್ಯಸ್ವಾಮೀಜಿ ಮಹಾಪೂಜೆ, ಮಧ್ಯಾಹ್ನ 3 ಗಂಟೆಗೆ ಅಂತಾರಾಜ್ಯಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿ, ರಾತ್ರಿ 9 ಗಂಟೆಗೆ ಹಾಸ್ಯ ರಸಮಂಜರಿ ಜರುಗಲಿದೆ. 14ರಂದು ಬೆಳಗ್ಗೆ ಅಪಯ್ಯಸ್ವಾಮೀಜಿ ಗದ್ದುಗೆಗೆ ಮಹಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಬಳಿಕ 10 ಗಂಟೆಗೆ ಸಮಾರೋಪ ಸಮಾರಂಭದೊಂದಿಗೆ ಜಾತ್ರೆಯು ಸಮಾರೋಪಗೊಳ್ಳಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.