ಹೊಸಪೇಟೆ: ಕೃತಿ ಪ್ರಕಟಿಸುವುದು ಸುಲಭದ ಕೆಲಸವಲ್ಲ. ಕವಿಯಾದವನಿಗೆ ಪುಸ್ತಕ ಹೊರ ತರುವುದೆಂದರೆ ತಾಯಿ ಗರ್ಭದಿಂದ ಹೊರ ಬಂದಂತೆ ಎಂದು ಸಾಹಿತಿ ಡಾ.ದಯಾನಂದ ಕಿನ್ನಾಳ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಲೇಖಕಿ ಶೀಲಾ ಮಂಜುನಾಥ ಬಡಿಗಿ ರಚಿತ ವಿಜಯಸಿರಿ ಇತಿಹಾಸದ ‘ಗರಿ ಕವನ’ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಇದನ್ನೂ ಓದಿ: ನೆಲದ ಸಂಸ್ಕೃತಿಯ ಬೋಧನೆ ಅಗತ್ಯ, ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮದಲ್ಲಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಹೇಳಿಕೆ
ರಚಿಸಿದ ಒಂದು ಕವನ, ಕಥೆಯನ್ನು ಹಲವು ಬಾರಿ ಓದಬೇಕು. ಉತ್ತಮ ಕೃತಿ ಹೊರಬರಲು ಪದೇಪದೆ ತಿದ್ದಬೇಕು. ಬಳಿಕ ಮುದ್ರಣಕ್ಕೆ ಕಳಿಸಬೇಕು. ಕೃತಿ ಸಹೃದಯಿಗಳಿಗೆ ಮೆಚ್ಚುಗೆಯಾದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು.
ನಿವೃತ್ತ ಅಧ್ಯಾಪಕ ಪ್ರೊ.ವಿಜಯಕುಮಾರ್ ಮಾತನಾಡಿ, ನೆಪೋಲಿಯನ್ ಪುಸ್ತಕ ಹೊರತರುವುದೆಂದರೆ ಟಂಕಸಾಲೆಯಲ್ಲಿ ಒಂದೊಂದೆ ನಾಣ್ಯವನ್ನು ಕೆತ್ತಿ ಹೊರತೆಗೆದಂತೆ. ಪ್ರತಿಯೊಂದು ಕೃತಿಯು ಅಮೂಲ್ಯವಾದ ರತ್ನಗಳಿದ್ದಂತೆ. ಅವುಗಳನ್ನು ನಾಡಿಗೆ ನೀಡಿದ ಕೀರ್ತಿ ಲೇಖಕರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಧರ್ಮನಗೌಡ ಮಾತನಾಡಿದರು. ಜಾಂಬವ ಬ್ರಹ್ಮಾನಂದಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಎಸ್.ಡಿ.ಸುಲೋಚನಾ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಕವಿತಾ ನಾಯ್ಡು, ವಿ.ಪರಶುರಾಮ, ಡಿ.ಬಸಂತ, ನಾಗರಾಜ ಪತ್ತಾರ್, ನಯನಾ ಉಮೇಶ್, ಯಮುನಾ ಕುಲಕರ್ಣಿ, ಶಿಕ್ಷಕ ಯರಿಸ್ವಾಮಿ ಇದ್ದರು.