ಖಾನಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಹೊಸ ಡಯಾಲಿಸಿಸ್ ಯಂತ್ರ ಅಳವಡಿಸಲಾಗಿದ್ದು, ಪ್ರತಿದಿನ ನಾಲ್ಕು ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಶಾಸಕ ವಿಠ್ಠಲ ಹಲಗೇಕರ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಅಳವಡಿಸಿದ್ದ ಎರಡು ಡಯಾಲಿಸಿಸ್ ಯಂತ್ರಗಳ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಮೂತ್ರಪಿಂಡದ ಸಮಸ್ಯೆಯಿರುವವರಿಗೆ ಡಯಾಲಿಸಿಸ್ ಕೇಂದ್ರ ಸ್ಥಾಪನೆಯಿಂದ ಸಾಕಷ್ಟು ಅನುಕೂಲವಾಗಲಿದ್ದು, ಸದುಪಯೋಗ ಪಡೆಯಬೇಕು ಎಂದರು. ಕೇಂದ್ರದ ವಿಶೇಷ ತ ಡಾ. ಮಹೇಶ ಕೋಣೆ, ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಕಿವುಡಸಣ್ಣವರ, ಡಾ.ನಾರಾಯಣ ವಡ್ಡಿನವರ, ಬಿಜೆಪಿ ಮುಖಂಡ ಸಂಜಯ ಕುಬಾಲ, ಗುಂಡು ಟೋಪಿನಕ್ತಿ, ಸುನೀಲ ಮಡ್ಡಿಮನಿ, ಪ್ರಕಾಶ ನೀಲಜ್ಕರ, ವಿಠ್ಠಲ ಕರ್ಮಲ್ಕರ, ರಾಜೇಂದ್ರ ರೆಕಾ, ಚಂಗಪ್ಪ ಬಚೋಲ್ಕರ್, ಮೋಹನ ಪಾಟೀಲ, ಬಾಬಾ ದೇಸಾಯಿ, ರವಿ ಪಾಟೀಲ ಇತರರಿದ್ದರು.