ಸಿಂಧನೂರಿನಲ್ಲಿ ನರೇಗಾ ಸಹಾಯಕ ನಿರ್ದೇಶಕ ಆಲಂಬಾಷಾಗೆ ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಸಮಿತಿ ಪ್ರಧಾನ ಸಂಚಾಲಕ ಮೌನೇಶ ಜಾಲವಾಡಗಿ, ಸಂಚಾಲಕರಾದ ರಮೇಶ ಶ್ರೀನಿವಾಸ್ ಕ್ಯಾಂಪ್, ದುರುಗೇಶ ಕಲಮಂಗಿ, ಚನ್ನಬಸವ ಯಾಪಲಪರ್ವಿ, ನರಸಪ್ಪ ಬಡಿಗೇರ್, ಮಲ್ಲಿಕಾರ್ಜುನ ಯಾಪಲಪರ್ವಿ ಇತರರಿದ್ದರು. 
ಜಿಲ್ಲೆ

ಅಧಿಕಾರಿಗಳಿಂದ ನರೇಗಾ ದುರುಪಯೋಗ

ರುದ್ರಪ್ಪ ವಾಲಿ

ಸಿಂಧನೂರು: ತಾಲೂಕಿನ ಗ್ರಾಪಂಗಳಲ್ಲಿ ನರೇಗಾ ಯೋಜನೆಯಲ್ಲಿ ಪರ್ಸೆಂಟೇಜ್ ದಂಧೆಗಿಳಿದಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳ ಹೋರಾಟ ಸಮಿತಿ ನರೇಗಾ ಸಹಾಯಕ ನಿರ್ದೇಶಕ ಆಲಂಬಾಷಾಗೆ ಬುಧವಾರ ಮನವಿ ಸಲ್ಲಿಸಿತು.

ಬಡವರ ಕಲ್ಯಾಣಕ್ಕಾಗಿ, ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವುದಕ್ಕಾಗಿ ಸರ್ಕಾರಗಳು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸಮರ್ಪಕವಾಗಿ ಜನರಿಗೆ ತಲುಪದೇ ಅಧಿಕಾರಿಗಳ ಕಾರ್ಯವೈಖರಿಯಿಂದ ಹಳ್ಳ ಹಿಡಿದಿವೆ. ಬಡ ರೈತ ಕಾರ್ಮಿಕರ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆ ಜಾರಿಗೊಳಿಸಿ, ಬಡವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.

ಅಧಿಕಾರಿಗಳು ಯೋಜನೆಯನ್ನು ಸಂಪೂರ್ಣ ದುರುಪಯೋಗ ಪಡಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಯೋಜನೆಯಡಿ ಕೋಟ್ಯಂತರ ರೂ. ಕಾಮಗಾರಿ ಮಾಡಿದ್ದು, 2025ರ ಜ.31ರಂದು ಸಾಮಗ್ರಿ ವೆಚ್ಚದ ಹಣ ಬಿಡುಗಡೆಯಾಗಿದೆ. ಕೆಲಸ ಮಾಡಿದ ಗುತ್ತಿಗೆದಾರರು ಮತ್ತು ಸಂಸ್ಥೆದಾರರಿಗೆ ಸಾಮಗ್ರಿ ವೆಚ್ಚದ ಹಣವನ್ನು ಸಂದಾಯ ಮಾಡುವಾಗ ಕೂಡಾ ಪರ್ಸೆಂಟೇಜ್ ತೆಗೆದುಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳ ಅಕ್ರಮ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ವೀರೇಶ ಕೆ ಹಂಚಿನಾಳ, ಅಂಬಣ್ಣ ಮಲ್ಲಾಪುರ, ವೀರೇಶ ದಿದ್ದಿಗಿ, ವಿರೂಪಾಕ್ಷಿ ಸಾಸಲಮರಿ, ರಾಘು ಅಮರಾಪುರ, ಆಲಂಬಷಾ ಬೂದಿವಾಳ, ಯಮನೂರ ಬಸಾಪುರ, ದುರ್ಗೇಶ ರೌಡಕುಂದ, ಪ್ರಕಾಶ, ಮರಿ ಬಸವ ಇತರರಿದ್ದರು.