ಬೆಳ್ತಂಗಡಿ: ಮೊದಲು ಮನುಷ್ಯ ಮದ್ಯ ಸೇವಿಸುತ್ತಾನೆ. ನಂತರ ಮದ್ಯ ಮನುಷ್ಯನನ್ನು ಸೇವಿಸುತ್ತದೆ. ಕೊನೆಗೆ ಮದ್ಯ ಮದ್ಯವನ್ನೇ ಸೇವಿಸುತ್ತದೆ. ಈ ಹಂತಕ್ಕೆ ವ್ಯಸನ ಅನ್ನುತ್ತಾರೆ. ಮದ್ಯಪಾನದ ವ್ಯಸನ ನಮ್ಮ ಬದ್ಧತೆ ಮತ್ತು ತೀರ್ಮಾನಗಳಲ್ಲಿ ದೋಷವುಂಟು ಮಾಡಿ ಮನಸ್ಸು ಮತ್ತು ಶರೀರಕ್ಕೆ ಅಪಾಯ ತಂದೊಡ್ಡುತ್ತದೆ. ಆದುದರಿಂದ ಮದ್ಯಪಾನ ವಿಷ ಮತ್ತು ದೋಷ ಪೂರ್ಣವಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ತ್ಯಜಿಸುವ ಸಂಕಲ್ಪ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 232ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಆಗಮಿಸಿದ 62 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶಿಬಿರಾಧಿಕಾರಿ ದಿನೇಶ್ ಮರಾಠಿ ಮಾತನಾಡಿ, ಪ್ರಸ್ತುತ ಸಮುದಾಯದಲ್ಲಿ ನಡೆಯುವ ಮದ್ಯವರ್ಜನ ಶಿಬಿರಗಳ ಕುರಿತಾಗಿ ಹಾಗೂ ಶಿಬಿರದ ಶಿಬಿರಾರ್ಥಿಗಳ ಕುರಿತಾದ ಅಂಕಿ-ಅಂಶ ವಿವರಿಸಿದರು.
ಡಾ.ಮೋಹನದಾಸ ಗೌಡ, ಡಾ.ಬಾಲಕೃಷ್ಣ ಭಟ್, ಡಾ.ಜೊನಥನ್, ಸುಮನ ಪಿಂಟೋ ವೈದ್ಯಾಧಿಕಾರಿಗಳಾಗಿ, ಸಲಹೆಗಾರರಾಗಿ ಸಹಕರಿಸಿದರು. ಕಾರ್ಯಸೂಚಿಯಂತೆ ಯೋಗ, ಧ್ಯಾನ, ವ್ಯಾಯಾಮ, ಅನಿಸಿಕೆ, ಆತ್ಮಾವಲೋಕನ, ಗುಂಪು ಚರ್ಚೆ, ಸಲಹೆ, ಕುಟುಂಬದ ದಿನ, ಹೀಗೆ ವಿವಿಧ ಕಾರ್ಯಕ್ರಮ ಆಯೋಜಿಸಿ ಮನಪರಿವರ್ತನೆಗೆ ಅವಕಾಶ ಮಾಡಿಕೊಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್‌ಎಸ್.ಎಸ್., ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ಮಾಧವ ಗೌಡ, ಆರೋಗ್ಯ ಸಹಾಯಕಿ ರಂಜಿತಾ ಸಹಕರಿಸಿದರು. ಮುಂದಿನ ವಿಶೇಷ ಶಿಬಿರ ಅ.7ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.
ಕೆಟ್ಟ ಸಹವಾಸದಿಂದ ಭವಿಷ್ಯ ಹಾಳಾಯಿತು. ಜೀವನದಲ್ಲಿ ಹೊಂದಿರುವ ಚಿನ್ನದಂಥ ಅವಕಾಶ ಕಳೆದುಕೊಳ್ಳಬೇಕಾಯಿತು. ಇನ್ನೇನು ಬೇರೆದಾರಿ ಇಲ್ಲ ಎಂಬ ಸ್ಥಿತಿಗೆ ತಲುಪಿದ ನನ್ನನ್ನು ಈ ಶಿಬಿರಕ್ಕೆ ತಂದರು. ಈಗ ಎಲರಂತೆ ನೆಮ್ಮದಿಯಲ್ಲಿದ್ದೇನೆ. ಇನ್ನೆಂದಿಗೂ ಕುಡಿಯುವುದಿಲ್ಲ. ರಾಜೇಶ್, ಶಿವಮೊಗ್ಗರಾಜೇಶ್, ಶಿವಮೊಗ್ಗ