ಜಿಲ್ಲೆ

ಶ್ರಾವಣ ಮಾಸದ ಪ್ರವಚನ 5ರಿಂದ

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರಾವಣ ಮಾಸ ನಿಮಿತ್ತ ನಗರದ ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ್​ ಸಂಸ್ಥೆ ವತಿಯಿಂದ ಆ. 5ರಿಂದ ಸೆ. 3ರವರೆಗೆ ಅಕ್ಕಮಹಾದೇವಿ ಜೀವನ ದರ್ಶನ ಪ್ರವಚನ, ಉಳವಿ ಚನ್ನಬಸವೇಶ್ವರರ ಮಹಾರಥೋತ್ಸವ ಆಯೋಜಿಸಲಾಗಿದೆ ಎಂದು ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ್​ ಸಂಸ್ಥೆ ಅಧ್ಯಕ್ಷ ಡಾ. ಎಸ್​.ಆರ್​. ರಾಮನಗೌಡರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 5ರಂದು ಸಂಜೆ 5.30ಕ್ಕೆ ದೇವಸ್ಥಾನ ಆವರಣದಲ್ಲಿ ಗದಗ ಶಿವಾನಂದ ಮಠದ ಶ್ರೀ ಸದಾಶಿವಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಅತ್ತಿವೇರಿಯ ಬಸವೇಶ್ವರಿ ಮಾತಾಜಿ ಪ್ರವಚನ ನೀಡುವರು ಎಂದರು.
ಆ. 5ರಿಂದ ನಿತ್ಯ ಸಂಜೆ 6.30ರಿಂದ ಅಕ್ಕಮಹಾದೇವಿ ಜೀವನ ದರ್ಶನ ಪ್ರವಚನವು ಮುಂಡಗೋಡ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಅವರಿಂದ ಜರುಗಲಿದೆ. ಆ.11 ರ ಸಂಜೆ 6.30ಕ್ಕೆ ಕುಂದಗೋಳದ ಶ್ರಿ ಬಸವಣ್ಣ ಅಜ್ಜನವರು, ಆ. 18 ರ ಸಂಜೆ 6.30ಕ್ಕೆ ಶಿವಶರಣೆಯರ ವಚನದಲ್ಲಿ ಬರುವ ಜೀವನ ಸಂದೇಶ ಕುರಿತು ಡಾ. ವೀಣಾ ಬಿರಾದಾರ ಅನುಭಾವ ನುಡಿ ಸಲ್ಲಿಸುವರು ಎಂದರು.
ಸೆ. 2ರಂದು ಬೆಳಗ್ಗೆ 7ಗಂಟೆಗೆ ಶ್ರೀ ಚನ್ನಬಸವಣ್ಣ ಹಾಗೂ ಶ್ರೀ ವೀರಭದ್ರೇಶ್ವರರಿಗೆ ಮಹಾರುದ್ರಾಭಿಷೇಕ ಮತ್ತು ವಚನ ಪಠಣ ನಡೆಯಲಿದೆ. ಸಂಜೆ 4ಕ್ಕೆ ಉಳವಿ ಚನ್ನಬಸವೇಶ್ವರರ ಮಹಾರಥೋತ್ಸವ ಜರುಗಲಿದೆ. ಸೆ. 3ರ ಬೆಳಗ್ಗೆ 10ಕ್ಕೆ ಉಪ್ಪಿನಬೆಟಗೇರಿ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರಾವಣ ಮಾಸದ ಪ್ರವಚನ ಮುಕ್ತಾಯ ಸಮಾರಂಭದ ಜರುಗಲಿದೆ. ಎಲ್ಲ ಧಾರ್ಮಿಕ ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಟಿ.ಎಲ್​.ಪಾಟೀಲ, ಎನ್​.ಬಿ. ಗೋಲಣ್ಣವರ, ಪಿ.ಎಸ್​. ದಂಡಿನ, ಜಿ.ಬಿ. ಅಳಗವಾಡಿ, ಡಿ.ಬಿ. ಪಾಟೀಲ, ಎಂ.ಸಿ. ಪಾಟೀಲ, ಜಿ.ಟಿ. ಶಿರೋಳ, ಇತರರು ಇದ್ದರು.