ರಬಕವಿಯ ಹೊಸೂರಿನ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಚೇರ್ಮನ್ ಸತೀಶ ಹಜಾರೆ, ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಪ್ರಾಚಾರ್ಯ ಬಸವರಾಜ ಕಲಾದಗಿ, ಶ್ರೀಶೈಲ ಕುಂಬಾರ ಇದ್ದರು. 
ಜಿಲ್ಲೆ

21 ರಿಂದ ವರ್ಷದ ಹಜಾರೆ ಹಬ್ಬದ

ರಬಕವಿ/ಬನಹಟ್ಟಿ: ರಬಕವಿ ಹೊಸೂರಿನ ಹಜಾರೆ ಫೌಂಡೇಷನ್ ಅಡಿಯ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯ 10ನೇ ಹಜಾರೆ ಹಬ್ಬ ಡಿ. 20 ರಿಂದ 21 ರ ವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಸಂಸ್ಥೆ ಚೇರ್ಮನ್ ಸತೀಶ ಹಜಾರೆ ತಿಳಿಸಿದರು.

ಸಂಸ್ಥೆಯ ಸಭಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆ 10ನೇ ವರ್ಷದ ಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ. ಡಿ. 20 ರ ಸಂಜೆ 3.30 ಕ್ಕೆ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪಾರಿತೋಷಕ ವಿತರಿಸಲಾಗುವುದು. ವಸಂತ ಹಜಾರೆ ಗೌರವ ಅಧ್ಯಕ್ಷತೆ, ಪದ್ಮಾವತಿ ಹಜಾರೆ ಅಧ್ಯಕ್ಷತೆ ವಹಿಸುವರು. ಶ್ರೀಪಾದ ಗುಂಡಾ, ಶಂಕರ ಅರಬಳ್ಳಿ, ಸಂತೋಷ ಸಮಾಜೆ, ವಿಠ್ಠಲ ಅಜ್ಜನಗೌಡರ, ಸುಕುಮಾರ ಕದ್ದು, ಕಾಡೇಶ ಕೋಳೂರು, ಎಸ್. ಎ. ಬಿಜಾಪೂರ, ಬಿ. ಎಂ. ಹಳಮನಿ, ಸಂತೋಷ ಬಡ್ಡಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಡಿ. 21 ರಂದು ಸಂಜೆ 4.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಹಜಾರೆ ಹಬ್ಬ ನಡೆಯಲಿದೆ. ಶೇಗುಣಸಿಯ ಮಹಾಂತ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಗೌರವಾಧ್ಯಕ್ಷರಾಗಿ ಗಣಪತರಾವ ಹಜಾರೆ, ಅಧ್ಯಕ್ಷ ರಾಗಿ ಚಡಚಣದ ಬಾಹುಬಲಿ ಮುತ್ತಿನ, ಜಮಖಂಡಿಯ ಡಿವೈಎಸ್ಪಿ ಶಾಂತವೀರ ಈ., ಡಿಡಿಪಿಐ ವಿವೇಕಾನಂದ ಎಂ., ರಾಜಶೇಖರ ಪಟ್ಟಣಶೆಟ್ಟಿ, ಎ. ಕೆ. ಬಸನ್ನವರ, ಸತೀಶ ಹಜಾರೆ ಮತ್ತಿತರರು ಆಗಮಿಸುವರೆಂದು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಪ್ರಾಚಾರ್ಯ ಬಸವರಾಜ ಕಲಾದಗಿ, ಶ್ರೀಶೈಲ ಕುಂಬಾರ ಸೇರಿ ಶಾಲಾ ಸುಧಾರಣೆ ಸಮಿತಿ ಸದಸ್ಯರು, ಹಿರಿಯರು ಇದ್ದರು.