ಅಥಣಿ ಪಟ್ಟಣದ ಸಿದ್ಧೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪಿ.ಎಲ್.ಪೂಜಾರಿ, ಎ.ಆರ್.ಕಣಬೂರ, ಎಸ್.ಎಂ.ಗೆಜ್ಜಿ, ಎನ್.ಎನ್.ನೂಲಿ ಇತರರು ಇದ್ದರು. 
ಜಿಲ್ಲೆ

ಕ್ರೀಡೆಯಿಂದ ಮನೋದೈಹಿಕ ಬೆಳವಣಿಗೆ

ಪ್ರಶಾಂತ ಹೂಗಾರ

ಅಥಣಿ: ವಿದ್ಯಾರ್ಥಿಗಳ ಮನೋದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎಂದು ಪ್ರಾಚಾರ್ಯ ಎ.ಆರ್.ಕಣಬೂರ ಹೇಳಿದರು.

ಪಟ್ಟಣದ ಸಿದ್ಧೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸ್ವಾಗತ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಉಪನ್ಯಾಸಕ ಪಿ.ಎಲ್.ಪೂಜಾರಿ ಮಾತನಾಡಿ, ಅವಕಾಶಗಳ ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು ಎಂದರು.
ಕಾಲೇಜು ಆಡಳಿತಾಧಿಕಾರಿ ಎಸ್.ಎಂ.ಗೆಜ್ಜಿ ಮಾತನಾಡಿ, ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಉಪನ್ಯಾಸಕರಾದ ಎನ್.ಎನ್.ನೂಲಿ, ಐ.ಕೆ.ಘಂಟಿಮಠ, ಆನಂದ ಲಗಳಿ, ಕುಮಾರ ಗಸ್ತಿ, ಆರ್.ಜಿ.ಕಾರ್ಚಿ ಇತರರಿದ್ದರು.