ಅಂಕಲಿಯ ಕೆಎಲ್‌ಇ ಸಿಬಿಎಸ್‌ಇ ಶಾಲೆಯಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಡಿಡಿಪಿಐ ಗಜಾನನ ಮನ್ನಿಕೇರಿ ಮಾತನಾಡಿದರು. ಎನ್.ಜಿ.ಪಾಟೀಲ, ಭಾರತಿ ಪಾಟೀಲ, ಬಿ.ಎ.ಮೇಕನಮರಡಿ, ಎನ್.ಜಿ.ಪಾಟೀಲ ಇದ್ದರು. 
ಜಿಲ್ಲೆ

ಸ್ಕೌಟ್ಸ್, ಗೈಡ್ಸ್‌ನಿಂದ ಮಕ್ಕಳಲ್ಲಿ ಶಿಸ್ತು

ಚಿಕ್ಕೋಡಿ: ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಮಕ್ಕಳಲ್ಲಿ ಶಿಸ್ತು, ಸಂಯಮ ಬೆಳೆಯುವುದರಿಂದ ಅವರು ಪ್ರತಿಭಾವಂತರಾಗುತ್ತಾರೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು. ತಾಲೂಕಿನ ಅಂಕಲಿಯ ಕೆಎಲ್‌ಇ ಸಿಬಿಎಸ್‌ಇ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ ಮಕ್ಕಳು ರಾಜ್ಯ ಪುರಸ್ಕಾರ ಪಡೆದ ಹಿನ್ನೆಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಶಾಲೆಯಲ್ಲಿಯು ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಪ್ರಾರಂಭಿಸಲು ಶಿಕ್ಷಕರು ಮುತುವರ್ಜಿ ವಹಿಸಬೇಕು ಎಂದರು. ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೇಕನಮರಡಿ, ಪ್ರಾಚಾರ್ಯೆ ಭಾರತಿ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿ ಅಧ್ಯಕ್ಷ ಮೋಸಿನ್ ಪಟೇಲ, ಜಿಲ್ಲಾ ಸಂಘಟಕ ಎನ್.ಬಿ.ಗುಡಸೆ, ಡಿ.ಬಿ.ಅತ್ತಾರ, ಕಾರ್ಯದರ್ಶಿ ಎನ್.ಜಿ.ಪಾಟೀಲ, ಕಾಗವಾಡ ಕಾರ್ಯದರ್ಶಿ ಎಂ.ಕೆ.ಕಾಂಬಳೆ, ರೂಪಾ ನಾಯಿಕ ಉಪಸ್ಥಿತರಿದ್ದರು.