ಜಿಲ್ಲೆ

ನರಗುಂದದಲ್ಲಿ ರಾಯಚೂರ ಪೀರಾ ಉರುಸು 29ರಿಂದ

ಬಸವರಾಜ ವೀರಪ್ಪ ಗರಗ

ನರಗುಂದ: ಪಟ್ಟಣದ ಸೋಮಾಪೂರ ಅರಿಷಿಣಗೋಡಿ ರಸ್ತೆಗೆ ಹೊಂದಿಕೊಂಡಿರುವ ರಾಯಚೂರ ಪೀರಾ ಅವರ 4ನೇ ವರ್ಷದ ಉರುಸು ಪ್ರಯುಕ್ತ ಜೂ. 29ರಿಂದ ಜು. 1ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ.

ಹಜರತ್ ಸೈಯದ್ ಶಾ ಖ್ವಾಜಾ ಸಾದಿಕ್ ಪೀರಹುಸೇನಿ ಚಿಸ್ತಿ ಅಲ್​ಖಾದ್ರಿ ಸಜ್ಜಾದೇ ನಶೀನ್, ಹಜರತ್ ಸೈಯದ್ ಶಾ ಖ್ವಾಜಾ ಸಾಬೀರ್ ಪೀರಹುಸೇನಿ ಚಿಸ್ತಿ ಅಲ್​ಖಾದ್ರಿ ಬಿರಾದಾರ ಸಜ್ಜೇದಾ ನಶೀನ್, ಹಜರತ್ ಮೌಲಾನಾ ಸೈಯದ್ ಶಾ ಖ್ವಾಜಾ ಅಹ್ಮದ್ ಪೀರಹುಸೇನಿ ಚಿಸ್ತಿ ಅಲ್​ಖಾದ್ರಿ ಬಿರಾದಾರ ಸಜ್ಜೇದೇ ನಶೀನ್ ರಾಯಚೂರ ಅವರ ಅಧ್ಯಕ್ಷತೆಯಲ್ಲಿ ಜೂ. 29ರಂದು ಮಧ್ಯಾಹ್ನ 1 ಗಂಟೆಗೆ ಹೊರಕೇರಿ ನೂರಾನಿ ಮಸೀದಿ ಹತ್ತಿರದ ಸಾಹೇಬರ ಖಾನಕಾದಿಂದ ಸಕಲ ವಾದ್ಯ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮಾರ್ಗವಾಗಿ ಸೋಮಾಪೂರ ಖಬರಸ್ತಾನ ಹತ್ತಿರದ ಶರೀಫ ದರ್ಗಾವರೆಗೆ ಮೆರವಣಿಗೆ ಜರುಗುವುದು.

ಸಂಜೆ 6 ಗಂಟೆಗೆ (ಸಂದಲ್) ಗಂಧ ಸಮರ್ಪಣೆ, 7 ಗಂಟೆಗೆ ರಾಯಚೂರಿನ ಖತೀಬ್ ಅಹಲ್ಲೆ ಸುನ್ನತ್ ಮುಖ್ರರರ್ ಸುಲಾಬಯಾನ್ ಹಜರತ್ ಮೌಲಾನಾಷಾ ಮಹ್ಮದಜಾಫರಖಾನ್ ಖಾದ್ರಿ ಖತೀಬ ವಾ. ಇಮಾಮ್ ಮಸ್ಜೀದ ಬೀಬಿಹಲಿಮಾ ಅವರಿಂದ ಉರ್ದು ಬಯ್ಯಾನ, ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಜೂ. 30ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರ ಉಪ್ಪಿನ ಅಂಗಡಿಯ ಮೌಲಾನಾ ಮಸೂದ್ ಶಾಫಿ ಅವರಿಂದ ಕನ್ನಡದಲ್ಲಿ ಬಯ್ಯಾನ, ಮಧ್ಯಾಹ್ನ 1 ಗಂಟೆಗೆ ಉರುಸು ಫಾತೇಹಾ, ಸಂಜೆ ಖವ್ವಾಲಿ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಲಿವೆ. ಜುಲೈ 1ರಂದು ಸಂಜೆ 6 ಗಂಟೆಗೆ ಜಿಯಾರತ ಫಾತೇಹಾ ನಡೆಯಲಿದೆ ಎಂದು ರಾಯಚೂರ ಪೀರ ದರ್ಗಾ ಕಮಿಟಿ ಹಾಗೂ ಸಕಲ ಸದ್ಭಕ್ತ ಮಂಡಳಿ ವ್ಯವಸ್ಥಾಪಕರಾದ ಕೆ.ಬಿ. ಖಲೀಫ್ ಹಾಗೂ ಬುಡ್ನೇಸಾಬ್ ಮಠಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.