ಬೈಲಹೊಂಗಲ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ನ.10ರಂದು ಜರುಗಲಿದ್ದು, ಇದರ ಅಂಗವಾಗಿ ನ.12ರಿಂದ 15ರ ವರೆಗೆ ಬೃಹತ್ ಕೃಷಿ ಮೇಳ ಹಾಗೂ ಜಾನುವಾರು ಜಾತ್ರೆ ಹಮ್ಮಿಕೊಳ್ಳುವುದಾಗಿ ಶಾಸಕ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಜಾತ್ರಾ ಕಮಿಟಿ ಹಾಗೂ ಕೃಷಿ ಇಲಾಖೆಯಿಂದ ಶನಿವಾರ ತೀರ್ಮಾನ ಕೈಗೊಳ್ಳಲಾಯಿತು.
ಶಿವರಂಜನ ಬೋಳನ್ನವರ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಕೆವಿಕೆ ಮತ್ತಿಕೊಪ್ಪದ ಡಾ.ಮಂಜುನಾಥ, ತೋಟಗಾರಿಕೆ ಇಲಾಖೆ ಅಧಿಕಾರಿ ಶೀಲಾ ಮುರಗೋಡ, ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್.ಅರಳಿಕಟ್ಟಿ, ಮಹೇಶ ಬೆಲ್ಲದ, ಮಹಾಂತೇಶ ಜಿಗಜಿನ್ನಿ, ಮಡಿವಾಳಪ್ಪ ಹೋಟಿ, ಮಹಾಂತೇಶ ತುರಮರಿ, ವಿರುಪಯ್ಯ ಕೋರಿಮಠ, ಬಸವರಾಜ ಭರಮನ್ನವರ, ರಾಜು ಕಡಸೋಮನ್ನವರ, ರಾಜು ಜನ್ಮಟ್ಟಿ, ಮಹಾಂತೇಶ ಮತ್ತಿಕೊಪ್ಪ, ಮುರಗೇಶ ಗುಂಡ್ಲೂರ, ಈರಣ್ಣ ಬೆಟಗೇರಿ, ಶ್ರೀಶೈಲ ಯಡಳ್ಳಿ, ಸುಭಾಸ ತುರಮರಿ ಇತರರಿದ್ದರು.