ಜಿಲ್ಲೆ

ನಿರ್ಲಕ್ಷ್ಯದಿಂದ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹಿನ್ನಡೆ

ಪ್ರಶಾಂತ ಹೂಗಾರ

ಬೈಲಹೊಂಗಲ: ಬೆಳಗಾವಿಯ ಸುವರ್ಣಸೌಧದಲ್ಲಿ ವರ್ಷಕ್ಕೊಮ್ಮೆ ನಡೆಯುವ ಚಳಿಗಾಲ ಅಧಿವೇಶನ ಕೇವಲ ಟೀಕೆ-ಟಿಪ್ಪಣೆ ಮತ್ತು ಪ್ರತಿಭಟನೆಗಳಿಗಷ್ಟೇ ಸೀಮಿತವಾಗಿದ್ದು, ಉಕ ಅಭಿವೃದ್ಧಿ ಪರ ಚರ್ಚೆ ನಡೆಯುತ್ತಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಉದ್ಯಾನದ ಬಳಿ ಕಿತ್ತೂರು ಕರ್ನಾಟಕ ಸೇನೆ ಉದ್ಘಾಟನೆ, ಕರ್ನಾಟಕ ರಾಜ್ಯೋತ್ಸವ- ಸಮಾರಂಭ 2024 ಕಾರ್ಯಕ್ರಮ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬರೀ ರಾಜಕೀಯ ಪಕ್ಷಗಳ ಕಿತ್ತಾಟದಿಂದ ಉಕ ಸೊರಗಿದೆ. ಯಾವುದೇ ಪಕ್ಷ ಬಂದರೂ ಉಕ ಅಭಿವದ್ಧಿ ಕುರಿತು ಗಂಭೀರ ಚಿಂತನೆಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಕಿತ್ತೂರು ಕರ್ನಾಟಕ ಸೇನೆ ರಾಜ್ಯಮಟ್ಟದಲ್ಲಿ ಬೆಳೆಯಲೆಂದು ಶುಭ ಹಾರೈಸಿದರು.

ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ, ವಕೀಲ ಎ್.ಎಸ್.ಸಿದ್ದನಗೌಡರ ಮಾತನಾಡಿದರು. ಹಿರಿಯ ಪತ್ರಕರ್ತ ಶ್ರೀನಾಥ ಜೋಶಿ ಮಾತನಾಡಿ, ಕಿತ್ತೂರು ಕರ್ನಾಟಕ ಸೇನೆ ಉತ್ತರೋತ್ತರವಾಗಿ ಬೆಳೆಯಲೆಂದು ಶುಭ ಹಾರೈಸಿದರು. ಹಿರಿಯ ಪತ್ರಕರ್ತ ಈಶ್ವರ ಹೋಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಅಧ್ಯಕ್ಷ ಮಹಾದೇವ ತಳವಾರ, ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ನೇತತ್ವ ವಹಿಸಿದ್ದರು. ಸಮಾಜ ಸೇವಕ ನಾಗಪ್ಪ ಮೇಟಿ ಅವರಿಗೆ ಕರುನಾಡು ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖಂಡರಾದ ಬಿ.ಬಿ.ಗಣಾಚಾರಿ, ಶ್ರೀಶೈಲ ಯಡಳ್ಳಿ, ಗುರು ಮೆಟಗುಡ್ಡ, ಸುನೀಲ ಮರಕುಂಬಿ, ಮುರಿಗೆಪ್ಪ ಗುಂಡ್ಲೂರ, ನಾಗೇಶ ಯಕ್ಕುಂಡಿ, ಎಂ.ಬಿ.ಹಿರೇಮಠ, ಪ್ರಭಾಕರ ಭಜಂತ್ರಿ, ಕಸ್ತೂರಿ ಬಾವಿ, ಸಣಗೌಡ ಸಂಗನಗೌಡರ, ಶಿವಾನಂದ ಕುರಬೇಟ, ಪ್ರಕಾಶ ಕಂಠಿ ಇತರರು ಇದ್ದರು. ಸಿದ್ದಾರೂಢ ಹೊಂಡಪ್ಪನವರ ಸ್ವಾಗತಿಸಿದರು. ನಾಗವೇಣಿ ಹೂಲಿಕೇರಿ ನಿರೂಪಿಸಿದರು. ತಾಲೂಕಾಧ್ಯಕ್ಷ ರಾಜು ಬೋಳಣ್ಣವರ ವಂದಿಸಿದರು.