ಎಮ್ಮಿಗನೂರಿನಲ್ಲಿ ಲಿಂ.ಶ್ರೀಗುರುಸಿದ್ಧಲಿಂಗ ಮಹಾಂತ ಶ್ರೀಗಳ 23ನೇ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮಕ್ಕೆ ಉರುವಕೊಂಡದ ಡಾ.ಕರಿಬಸವ ರಾಜೇಂದ್ರ ಶ್ರೀಗಳು ಚಾಲನೆ ನೀಡಿದರು. ವಾಮದೇವ ಶಿವಾಚಾರ್ಯರು, ವರಸದ್ಯೋಜಾತ ಶಿವಾಚಾರ್ಯರು, ಪ್ರಶಾಂತ ಸಾಗರ ಶಿವಾಚಾರ್ಯರು, ಬಸವಭೂಷಣ ಸ್ವಾಮಿ, ಉಮೇಶ್ವರ ಶಿವಾಚಾರ್ಯರು ಇತರರಿದ್ದರು. 
ಜಿಲ್ಲೆ

ಪುರಾಣ ಪ್ರವಚನಗಳಿಂದ ಜ್ಞಾನೋದಯ

ನರೇಶ್ ಕುಮಾರ್

ಕಂಪ್ಲಿ: ಜಗತ್ತಿನ ಬದಲಾವಣೆ ಹೊರ ಬೆಳಕಿನಿಂದಲ್ಲ, ಅಂತರಂಗದ ಬೆಳಕಿನಿಂದ ಸಾಧ್ಯ ಎಂದು ಉರುವಕೊಂಡದ ಡಾ.ಕರಿಬಸವ ರಾಜೇಂದ್ರ ಸ್ವಾಮೀಜಿ ಹೇಳಿದರು.

ಎಮ್ಮಿಗನೂರು ಗ್ರಾಮದ ಹಂಪಿಸಾವಿರ ದೇವರು ಮಹಾಂತರ ಮಠದಲ್ಲಿ ಲಿಂ.ಶ್ರೀಗುರುಸಿದ್ಧಲಿಂಗ ಮಹಾಂತ ದೇಶಿಕೇಂದ್ರ ರಾಜಗುರುಗಳ 23ನೇ ಪುಣ್ಯಸಂಸ್ಮರಣೋತ್ಸವ ನಿಮಿತ್ತ ಗುರುವಾರ ಶರಣರ ಚರಿತಾಮೃತ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂತರಂಗದ ಬೆಳಕಿಗೆ ಜ್ಞಾನೋದಯದ ಅಗತ್ಯವಿದೆ. ಪುರಾಣ ಪ್ರವಚನಗಳ ಶ್ರವಣದಿಂದ ಮನಸ್ಸಿನ ಜ್ಞಾನೋದಯವಾಗುತ್ತದೆ. ಇದರಿಂದ ಮನುಷ್ಯ ಸನ್ನಡತೆಯಿಂದ ಬದುಕಲು ಸಾಧ್ಯ ಎಂದರು.

ಸಾನ್ನಿಧ್ಯವಹಿಸಿದ್ದ ಹಂಪಿಸಾವಿರ ದೇವರು ಮಹಾಂತರ ಮಠದ ವಾಮದೇವ ಶಿವಾಚಾರ್ಯರು ಮಾತನಾಡಿದರು. ತೆಕ್ಕಲಕೋಟೆಯ ಕಂಬಾಳಿಮಠದ ವೀರಭದ್ರ ಶಿವಾಚಾರ್ಯರು ಧರ್ಮ ಧ್ವಜಾರೋಹಣ ಮಾಡಿದರು. ಹರಪನಹಳ್ಳಿಯ ವರಸದ್ಯೋಜಾತ ಶಿವಾಚಾರ್ಯರು, ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯರು, ಸಿರಗುಪ್ಪ ಬಸವಭೂಷಣ ಸ್ವಾಮಿ, ದೊಡ್ಡವಾಡದ ಉಮೇಶ್ವರ ಶಿವಾಚಾರ್ಯರು ಇತರರಿದ್ದರು.