ಜಿಲ್ಲೆ

ಮೋದಿಯಿಂದ ದೇಶದಲ್ಲಿ ಬೌದ್ಧಿಕ ಅಭಿವೃದ್ಧಿ ಆರಂಭ - ಅನಂತಕುಮಾರ ಹೆಗಡೆ

ಎಂ.ಕೆ. ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಹಿಡಿದ ನಂತರ ದೇಶದಲ್ಲಿ ಬೌದ್ಧಿಕ ಅಭಿವೃದ್ಧಿ ಶುರುವಾಗಿದೆ. ಕಾಶ್ಮೀರಕ್ಕೆ ವಿಷಯದ ಬಗ್ಗೆ ಕೈಹಾಕಲು ಕೆಲವರು ಹೆದರುತ್ತಿದ್ದರು. ಒಂದಿಷ್ಟು ಓಟು ಕೈತಪ್ಪಬಹುದೆಂಬ ಕಾರಣಕ್ಕೆ ಕಾಶ್ಮೀರದ ಹೆಸರು ಹೇಳಲು ಭಯಪಡುತ್ತಿದ್ದರು.

ಕಾಶ್ಮೀರ ಇಂದು ಅಧಿಕೃತವಾಗಿ ನಮ್ಮದಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರಕ್ಕೆ ಅಡಿಗಲ್ಲು ಹಾಕುವ ಮೂಲಕ ಹೋರಾಟಕ್ಕೆ ಅಂತಿಮ ತೆರೆ ಎಳೆದಿದ್ದಾರೆ.

ದಾಳಿಕೋರರ ಕ್ರೌರ್ಯದ ಅಡಿಯಲ್ಲಿ, ತಲೆ ಇಲ್ಲದ ಬುದ್ಧಿಜೀವಿಗಳ ವಾದದ ಅಡಿಯಲ್ಲಿ ಭಾರತದ ಅಂತರಾತ್ಮ ಕುಗ್ಗಿತ್ತು. ಆದರೆ, ಈಗ ಭಾರತ ಸ್ವಂತಿಕೆಯ ಆಧಾರದ ಮೇಲೆ ಎದ್ದು ನಿಂತಿದೆ. ಈ ದೇಶವನ್ನು ಕಟ್ಟುವಂತ, ಇತಿಹಾಸ ಸಾರುವ ಹೆಜ್ಜೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ಇಡಲಿದೆ ಎಂದರು. ಶಾಸಕ ಮಹಾಂತೇಶ ದೊಡಗೌಡರ ಮತ್ತಿತರರಿದ್ದರು.