ಬೆಳಗಾವಿ: ಕೆಎಲ್ಇ ಸಂಸ್ಥೆಯು ಕಾನೂನು ಪದವಿ ಕೋರ್ಸ್ಗಳಿಗೆ ಹೆಚ್ಚಿನ ಆದ್ಯತೆಯೊಂದಿಗೆ ಗುಣಾತ್ಮಕ ಶಿಣ ನೀಡುತ್ತಿದೆ. ಅಸಂಖ್ಯ ವಿದ್ಯಾರ್ಥಿಗಳು ದೇಶದ ನ್ಯಾಯಾಂಗ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯವು 50 ವರ್ಷಗಳಿಂದ ಅಂತಹ ವಿದ್ಯಾರ್ಥಿಗಳನ್ನು ಉತ್ಪಾದಿಸುತ್ತಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಸುವರ್ಣ ಸಂಭ್ರಮಾಚರಣೆ ನಿಮಿತ್ತ ಹಳೆಯ ವಿದ್ಯಾರ್ಥಿಗಳ ಸಂದಿಂದ ಭಾನುವಾರ ಆಯೋಜಿಸಿದ್ದ ವಾಕೋಥಾನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕೆಎಲ್ಇ ಸಂಸ್ಥೆಯು 109 ವರ್ಷಗಳಲ್ಲಿ ಆರೋಗ್ಯ ಮತ್ತು ಶಿಣ ೇತ್ರದಲ್ಲಿ ಅಗಾಧ ಸಾಧನೆ ಮಾಡಿದೆ. ಜತೆಗೆ ನಿರಂತರವಾಗಿ ಸಾಮಾಜಿಕ ಸೇವೆ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ವಿಸ್ತರಿಸಲಿದೆ. ಸಂಸ್ಥೆಯ ಕಾನೂನು ಕಾಲೇಜುಗಳು ಗುಣಾತ್ಮಕ ಶಿಣ ನೀಡುವ ಮೂಲಕ ಉತಷ್ಟ ವಕೀಲರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿವೆ ಎಂದರು.
ಉತ್ತಮ ವಕೀಲರಾಗಿ: ಕಾಲೇಜಿನ ಆಡಳಿತ ಮಂಡಳಿ ಅಧ್ಯ ಆರ್.ಬಿ.ಬೆಲ್ಲದ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ಅಧ್ಯಯನ ನಡೆಸುತ್ತಿರುವ ಕಾನೂನು ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಾನ ಮತ್ತು ಕೌಶಲಧಾರೆ ಎರೆದು ಉತ್ತಮ ವಕೀಲರಾಗಿ ಹೊರಹೊಮ್ಮಬೇಕು ಎಂದು ಕರೆಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾಯೆರ್ ಡಾ.ಜ್ಯೋತಿ ಹಿರೇಮಠ ಮಾತನಾಡಿ, ಹಳೆಯ ವಿದ್ಯಾರ್ಥಿಗಳೇ ಕಾಲೇಜಿನ ರಾಯಭಾರಿಗಳು. ಅವರ ಸಲಹೆ&ಸೂಚನೆಗಳು ಕಾಲೇಜಿನ ಬೆಳವಣಿಗೆಗೆ ಅತ್ಯಗತ್ಯ. ಸುವರ್ಣ ಮಹೋತ್ಸವದ ಅಂಗವಾಗಿ ವರ್ಷದುದ್ದಕ್ಕೂ ಹಲವು ರಚನಾತ್ಮಕ ಕಾರ್ಯಕ್ರಮ ಸಂಯೋಜಿಸಲಾಗಿದೆ ಎಂದರು.
ವಾಕೋಥಾನ್ವು ಕಾಲೇಜು ಕ್ಯಾಂಪಸ್ದಿಂದ ಪ್ರಾರಂಭವಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕ್ಯಾಂಪ್, ರೈಲು ನಿಲ್ದಾಣ ವೃತ್ತದಿಂದ ಸಾಗಿ ಮರಳಿ ಮಹಾವಿದ್ಯಾಲಯದ ಆವರಣದಲ್ಲಿ ಕೊನೆಗೊಂಡಿತು.
ಹಿರಿಯ ವಕೀಲ ಟಿ.ಸಿ. ಮೋದಗಿ, ವಿ.ಸಿ. ಬೆಂಬಳಗಿ, ಸುನೀಲ ತುಬಚಿ, ದೈಹಿಕ ಶಿಣ ನಿರ್ದೇಶಕ ಡಾ.ರೀಚಾ ರಾವ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲ್ನಡಿಗೆ ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾಲ್ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾಗ್ಯಶ್ರೀ ಮಗನಟ್ಟಿ, ಸಾಗರ ಬೆಳವಿ ಹಾಗೂ ಇತರ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು.
ಸಾಂಬ್ರಾ ಬಳಿ ಕಾನೂನು ವಿದ್ಯಾಲಯ
ಸಂಸ್ಥೆಯು ಗದಗ, ಹುಬ್ಬಳ್ಳಿ, ಚಿಕ್ಕೋಡಿ, ಬೆಂಗಳೂರು ಹಾಗೂ ಮುಂಬೈನಲ್ಲಿ ಕಾನೂನು ಮಹಾವಿದ್ಯಾಲಯ ಮುನ್ನಡೆಸುತ್ತಿದೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿವೆ. ಅವರು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೊಡಿಗಿಸಿಕೊಂಡು ಸಂಸ್ಥೆಗೆ ಹೆಸರು ತಂದಿದ್ದಾರೆ. ಬೆಳಗಾವಿ ಬಳಿ ಸಾಂಬ್ರಾ ರಸ್ತೆಗೆ ವಿನೂತನ ಕಾನೂನು ಮಹಾವಿದ್ಯಾಲಯ ಸ್ಥಾಪಿಸುವ ಯೋಜನೆ ರೂಪಿಸುತ್ತಿದೆ. ಶೋಷಣೆಗೊಳಗಾದ ಜನರಿಗೆ ನಿಸ್ವಾರ್ಥದಿಂದ ನ್ಯಾಯ ಒದಗಿಸುವ ಕಾರ್ಯದಲ್ಲಿ ವಕೀಲರು ತೊಡಗುವಂತಾಬೇಕು ಎಂದು ಕರೆ ನೀಡಿದರು. ಅರ್ಧ ಶತಮಾನ ಪೂರೈಸುತ್ತಿರುವ ಈ ಕಾಲೇಜು ಪ್ರಗತಿಯಲ್ಲಿ ಮುನ್ನಡೆಯಲಿ ಎಂದು ಡಾ.ಪ್ರಭಾಕರ ಕೋರೆ ಶುಭಕೋರಿದರು.