ಜಿಲ್ಲೆ

ಗುರುವಿನಿಂದ ಉಜ್ವಲ ಭವಿಷ್ಯ ನಿರ್ಮಾಣ

ಎಂ.ಎಸ್​.ಹಿರೇಮಠ ಬೆಳಗಾವಿ

ಇಟಗಿ: ಹಿಂದೆ ಗುರುವಿದ್ದು, ಮುಂದೆ ಗುರಿ ಇದ್ದಾಗ ಮಾತ್ರ ಬದುಕಿನಲ್ಲಿ ರ್ನಿದಿಷ್ಟ ಗುರಿ ತಲುಪಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಸಾಪ ತಾಲೂಕಾಧ್ಯ ಡಾ.ಎಸ್​.ಬಿ.ದಳವಾಯಿ ಹೇಳಿದರು.

ಸಮೀಪದ ಗಂದಿಗವಾಡ ಗ್ರಾಮದಲ್ಲಿ ಪರಂಜ್ಯೋತಿ ಪ್ರೌಢಶಾಲೆಯಲ್ಲಿ 2004&05ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕಲಿತ ಶಾಲೆ ಹಾಗೂ ಗುರುಗಳ ಸೇವೆ ಸ್ಮರಿಸಿ, ಗೌರವಿಸುತ್ತಿರುವ ಕಾರ್ಯ ಮಾದರಿ ಎಂದರು.

ನಿವೃತ್ತ ಮುಖ್ಯಶಿಕ ಪಿ.ವೈ.ಪಾಟೀಲ ಮಾತನಾಡಿ, ಭಾರತೀಯ ಸಂಸತಿ ಹಾಗೂ ಗುರು ಶಿಷ್ಯ&ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಗುರುವಂದನೆ ಕಾರ್ಯಕ್ರಮ ಅನುಕರಣೀಯವಾಗಿದೆ ಎಂದರು.

ನಿವೃತ್ತ ಶಿಕ ಜಿ.ವಿ.ಭಂಡಾರಿ ಮಾತನಾಡಿದರು. ಸಂಸ್ಥೆಯ ಚೇರ್ಮನ್​ ಉಮೇಶ ಮೂಲಿಮನಿ, ನಿವೃತ್ತ ಶಿಕರಾದ ಎಸ್​.ಆರ್​.ಎಮ್ಮಿ, ಸುಭಾಷ ಕುಲಕರ್ಣಿ,

ಎಲ್​.ಎಸ್​. ಕುಂದೇಕರ, ಎ.ಬಿ.ಮೂಲಿಮನಿ, ಬಿ.ಬಿ.ಕರವೀರನವರ, ಮುಖ್ಯಶಿಕ ಎಸ್​.ಎಂ.ನಾಯ್ಕ, ರುದ್ರಪ್ಪ ಕೋಲಕಾರ, ಹಳೆಯ ವಿದ್ಯಾರ್ಥಿಗಳಾದ ಶ್ರೀಧರ ಬಡಸದ, ಬಸವರಾಜ ಬಡಸದ, ರಾಜು ಚಂದನ್ನವರ, ಸಂಜೀವ ಗಾಣಗಿ, ಪ್ರವಿಣ ಬೈಲೂರ, ಚಂದಪ್ಪ ಗಿಂಡಿ, ಸಂತೋಷ ದೇಗಾವಿ, ಮಹಾವೀರ ಬಸ್ತವಾಡ ಇತರರಿದ್ದರು.