ಜಿಲ್ಲೆ

ತಮ್ಮನಿಂದ ಅಣ್ಣನಿಗೆ ಚಾಕು ಇರಿತ

ರುದ್ರಪ್ಪ ವಾಲಿ

ದೇವದುರ್ಗ: ತಾಲೂಕಿನ ಗಬ್ಬೂರು ಹೋಬಳಿಯ ಹೊನ್ನಟಗಿ ಗ್ರಾಮದಲ್ಲಿ ಕೌಟುಂಬಿಕ ಜಗಳ ಹಿನ್ನೆಲೆಯಲ್ಲಿ ಅಣ್ಣನಿಗೆ ತಮ್ಮ ಚಾಕು ಮಂಗಳವಾರ ಇರಿದಿದ್ದಾನೆ. ಬಾಬು ಪರಪ್ಪ ತೀವ್ರವಾಗಿ ಗಾಯಗೊಂಡಿದ್ದು ರಾಯಚೂರು ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಚಾಕುಹಾಕಿದ ತಮ್ಮ ನಿಂಗಪ್ಪ ಪರಪ್ಪ ಪರಾರಿಯಾಗಿದ್ದಾನೆ. ಮನೆಗೆ ನೀರು ಬಳಸುವ ಪಂಪ್‌ಸೆಟ್ ಸಂಬಂಧ ಕೆಲದಿನಗಳ ಹಿಂದೆ ಅಣ್ಣ -ತಮ್ಮನ ನಡುವೆ ಜಗಳವಾಗಿತ್ತು. ಮಂಗಳವಾರ ಮದ್ಯ ಸೇವೆಸಿದ್ದ ನಿಂಗಪ್ಪ ಅಣ್ಣ ಬಾಬು ಜತೆ ಜಗಳ ತೆಗೆದು ಚಾಕುವಿನಿಂದ ಇರಿದಿದ್ದಾನೆ. ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಗಂಗಪ್ಪ ಬುರ್ಲಿ ತಿಳಿಸಿದ್ದಾರೆ.