ಐಗಳಿ: ಹಬ್ಬ ಹರಿದಿನಗಳು ಮತ್ತು ಜಾತ್ರೆಗಳಿಂದ ಬಾಂಧವ್ಯ ವೃದ್ಧಿಯಾಗಲಿವೆ. ಎಲ್ಲರೂ ಸೇರಿ ತೇರು ಎಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗುವುದು ಎಂದು ತೆಲಸಂಗ ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಸ್ಥಳೀಯ ಸಿಂಧೂರ ವಸತಿ ಅಪ್ಪಯ್ಯ ಮಹಾಸ್ವಾಮಿಗಳ ಜಾತ್ರೆಯ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಮಾತನಾಡಿದರು.
ಜಾತ್ರೆ ಕಮಿಟಿ ಅಧ್ಯಕ್ಷ ನರಸಪ್ಪ ಸಿಂಧೂರ, ಉಪಾಧ್ಯಕ್ಷ ಮಹಾದೇವ ಹಾಲಳ್ಳಿ, ಕಾರ್ಯದರ್ಶಿ ಮಲಗೌಡ ಪಾಟೀಲ, ಬಸವರಾಜ ಚಮಕೇರಿ, ಮೋಹನ ಪಾಠನಕರ, ಮಹಾಂತೇಶ ಕೆಂಚನ್ನವರ ಇತರರಿದ್ದರು.