ನಿಪ್ಪಾಣಿ: ಶಿಸ್ತಿನಿಂದ ಅಧ್ಯಯನ ಮಾಡಿದರೆ ವಿದ್ಯಾರ್ಥಿಗಳು ಯಶಸ್ವಿ ಜೀವನ ನಡೆಸಬಹುದು. ಗುರುವಿನ ಮಾರ್ಗದರ್ಶನವಿದ್ದರೆ ಯಶಸ್ಸು ಹಿಂಬಾಲಿಸುತ್ತದೆ ಎಂದು ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾೀಶೆ ರಂಜಿತಾ ಎಸ್.ಕೆ. ಹೇಳಿದರು.
ನಗರದ ವಿಎಸ್‌ಎಂ ಜಿ.ಐ. ಬಾಗೇವಾಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘಟನೆ, ಪೊಲೀಸ್ ಇಲಾಖೆ ಹಾಗೂ ವಿದ್ಯಾ ಸಂವರ್ಧಕ ಮಂಡಳದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನದ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಸೇವನೆ ಒಮ್ಮೆ ಮನಸ್ಸಿಗೆ ಹಿಡಿಸಿದರೆ ಬಿಡಲು ಕಷ್ಟವೆನಿಸುತ್ತದೆ. ಇದರಿಂದ ದೇಹದ ಅಂಗಾಂಗಗಳು ನಿಸ್ತೇಜವಾಗುತ್ತ ಬರುತ್ತವೆ. ಆರಂಭದಲ್ಲಿ ಅದು ಖುಷಿ ನೀಡಿದರೂ ಮುಂದೊಂದು ದಿನ ಜೀವನದಲ್ಲಿ ಮುಳ್ಳಾಗುತ್ತವೆ. ಜೀವನ ಶೈಲಿ ಬದಲಾದ ಪರಿಣಾಮ ಕಿರಿಯರಿಗೂ ಹೃದಯಾಘಾತ ಸಂಭವಿಸುತ್ತಿವೆ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ಸ್ವಸ್ಥ ಸಮಾಜ ನಿರ್ಮಿಸಬೇಕು ಎಂದರು.
ನ್ಯಾಯವಾದಿ ನಿಲೇಶ ಹತ್ತಿ ಉಪನ್ಯಾಸ ನೀಡಿ, ಮಾದಕ ವಸ್ತುಗಳ ಸೇವನೆ ದೈಹಿಕ ಹಾಗೂ ಮಾನಸಿಕವಾಗಿ ಬಳಲುವಂತೆ ಮಾಡುತ್ತವೆ. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂೀಜಿ ಅಂತಹ ಮಹಾತ್ಮರು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದ ಪರಿಣಾಮ ಸರ್ವಕಾಲಕ್ಕೂ ನಮಗೆ ಪ್ರೇರಣೆ ನೀಡುತ್ತಾರೆ. ಇಂತಹ ಅನಾರೋಗ್ಯ ಬೆಳವಣಿಗೆಗಳು ಕಂಡು ಬಂದರೆ ಪ್ರಾಚಾರ್ಯರು ಅಥವಾ ಪೊಲೀಸ್ ಇಲಾಖೆಗೆ ತಿಳಿಸಿದರೆ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಪ್ರಾಚಾರ್ಯ ಡಾ.ನಿಂಗಪ್ಪ ಮಾದಣ್ಣವರ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾೀಶೆ ಸುನೀತಾ ಪ್ರಭನ್ನವರ,
ವಕೀಲರ ಸಂಘಟನೆಯ ತಾಲೂಕು ಅಧ್ಯಕ್ಷ ರವೀಂದ್ರ ಸಂಕಪಾಳ, ಉಪಾಧ್ಯಕ್ಷ ನಾಮದೇವ ವರಾಳೆ, ಕಾರ್ಯದರ್ಶಿ ಬಾಳಾಸಾಹೇಬ ಔರ‌್ನಾಳೆ ಇತರರಿದ್ದರು. ಉಪನ್ಯಾಸಕ ಸಂಜಯ ಮುತ್ನಾಳೆ ನಿರೂಪಿಸಿ ವಂದಿಸಿದರು.