ಜಿಲ್ಲೆ

ಎನ್ನೆಸ್ಸೆಸ್‌ನಿಂದ ವ್ಯಕ್ತಿತ್ವ ನಿರ್ಮಾಣ

Belagavi


ಮೂಡಲಗಿ: ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಎನ್‌ಎಸ್‌ಎಸ್ ಸಹಕಾರಿಯಾಗಿದೆ ಎಂದು ಡಾ. ತಿಮ್ಮಣ್ಣ ಗಿರಡ್ಡಿ ಹೇಳಿದ್ದಾರೆ.

ಇಲ್ಲಿನ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜ್ಞಾನದೊಂದಿಗೆ ಸಾಮಾಜಿಕವಾಗಿ ಸ್ಪಂದಿಸುವುದರಿಂದ ದೇಶದ ಏಕತೆ ಭದ್ರವಾಗುತ್ತದೆ ಎಂದರು.

ಮುಖ್ಯ ಅತಿಥಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎ.ಶಾಸ್ತ್ರಿಮಠ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಶಿಸ್ತು, ಸ್ವಾವಲಂಬನೆ ಹಾಗೂ ಒಗ್ಗಟ್ಟು ಬೆಳೆಸುತ್ತದೆ. ಶಿಬಿರದಲ್ಲಿ ಶ್ರದ್ಧೆಯಿಂದ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಪ್ರಾಚಾರ್ಯ ಎಂ.ಕೆ.ಕಂಕಣವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಏಳು ದಿನಗಳ ಶಿಬಿರದಲ್ಲಿ ಶ್ರಮದಾನ, ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು. ಬಿ.ಕೆ.ಬಡಗಣ್ಣವರ, ವೈ.ಎಸ್.ಬರಮಣ್ಣವರ, ಶಿವಾಜಿ ಮಾಲೋಜಿ ಉಪಸ್ಥಿತರಿದ್ದರು. ಬಿ.ಎಸ್.ಕಂಬಾರ ನಿರೂಪಿಸಿದರು. ಎಲ್.ಬಿ.ಮನ್ನಾಪುರೆ ವಂದಿಸಿದರು.