ಜಿಲ್ಲೆ

ಧರ್ಮಸ್ಥಳ ಸಂಘದಿಂದ ಜನಪರ ಯೋಜನೆ

ರಾಮದುರ್ಗ: ಪಟ್ಟಣದ ಭಾನಕಾರ ಪೇಟೆಯ ಶ್ರೀ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಯೋಜನೆಯ ಜ್ಞಾನವಿಕಾಸ ಕೇಂದ್ರದ ಮಹಿಳಾ ಸದಸ್ಯರಿಗೆ ಧಾರವಾಡ ಜ್ಞಾನ ವಿಕಾಸ ತರಬೇತಿ ಸಂಸ್ಥೆಯಿಂದ ಕೌಶಲ ಅಭಿವದ್ಧಿ ತರಬೇತಿ ಅಡಿಯಲ್ಲಿ ಸೀರೆಗೆ ಕುಚ್ಚು ಹಾಕುವ ತರಬೇತಿ ಕಾರ್ಯಕ್ರಮಕ್ಕೆ ತಾಲೂಕು ಯೋಜನಾಧಿಕಾರಿ ಸಚಿನ ಚಾಲನೆ ನೀಡಿದರು.

ಸಚಿನ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸುವ ಉದ್ದೇಶದಿಂದ ಸಂಸ್ಥೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಉಪನ್ಯಾಸಕಿ ಗೀತಾ ಮಾತನಾಡಿ, ಸ್ವ ಉದ್ಯೋಗದಿಂದ ಆರ್ಥಿಕ ಸಬಲೀಕರಣ ಹೊಂದಲಿ ಎಂದರು. ಜಿಲ್ಲಾ ಜನಜಾಗತಿ ವೇದಿಕೆ ಮಾಜಿ ಉಪಾಧ್ಯಕ್ಷ ರಮೇಶ ಜಲಗೇರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುನಿತಾ ಬಡಿಗೇರ, ಜವಳಿ ವರ್ತಕ ಪ್ರಕಾಶ ಸೂಳಿಭಾವಿ, ಸಂಪನ್ಮೂಲ ವ್ಯಕ್ತಿ ಕವಿತಾ ಇತರರಿದ್ದರು.