ಧುಳಗನವಾಡಿಯಲ್ಲಿ ಆಯೋಜಿಸಿದ್ದ ಸತ್ಸಂಗ ಚಿಂತನಗೋಷ್ಠಿಯಲ್ಲಿ ಸಿ.ಎ.ಪಾಟೀಲ ಮಾತನಾಡಿದರು. ಮಹಾಲಿಂಗ ಸ್ವಾಮೀಜಿ, ಸಾವಿತ್ರಿ ವಿಜಯನಗರೆ, ಅಪ್ಪಾಸಾಬ ಖೋತ, ಧನಪಾಲ ಕಮತೆ ಇದ್ದರು. 
ಜಿಲ್ಲೆ

ಆಸೆ-ಆಮಿಷಗಳಿಂದ ನೆಮ್ಮದಿ ಇರದು

ಪ್ರಶಾಂತ ಹೂಗಾರ

ಚಿಕ್ಕೋಡಿ: ಆಸೆ- ಆಮಿಷ ಮಿತಿಮೀರಿದರೆ ಶುಖ, ಶಾಂತಿ, ನೆಮ್ಮದಿ ಸಿಗುವುದಿಲ್ಲ ಎಂದು ಉಪತಹಸೀಲ್ದಾರ್ ಸಿ.ಎ. ಪಾಟೀಲ ಹೇಳಿದರು.

ತಾಲೂಕಿನ ಧುಳಗನವಾಡಿ ಗ್ರಾಮದಲ್ಲಿ ಸದ್ಗುರು ಶರಣ ಕಲಾಸೇವಾ ಮಂಡಳವು ಖೋತ ಪರಿವಾರದ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಮಾಸಿಕ 94ನೇ ಸತ್ಸಂಗ ಚಿಂತನಗೋಷ್ಠಿಯಲ್ಲಿ ಮಾತನಾಡಿ, ಸತ್ಸಂಗ ಭಕ್ತಿಯ ಮಾರ್ಗದೆಡೆ ಕರೆದೊಯ್ಯುತ್ತದೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಯಕ್ಸಂಬಾ ಶಿವಯೋಗಿ ಮಠದ ಮಹಾಲಿಂಗ ಶ್ರೀಗಳು ಮಾತನಾಡಿ, ಆತ್ಮ ಪರಮಾತ್ಮನ ಸ್ವರೂಪ, ಆತ್ಮವಿದ್ದಾಗ ಜೀವಕ್ಕೆ ಬೆಲೆ ಇದೆ. ಆದ್ದರಿಂದ ಹುಟ್ಟು-ಸಾವನ್ನು ಸಮನಾಗಿ ಸ್ವೀಕರಿಸಬೇಕೆಂದರು.ಸಾವಿತ್ರಿ ವಿಜಯನಗರೆ ಅಧ್ಯಕ್ಷತೆ ವಹಿಸಿದ್ದರು.

ಅಪ್ಪಾಸಾಬ ಖೋತ, ಧನಪಾಲ ಕಮತೆ, ಅಶೋಕ ಕ್ಷೀರಸಾಗರ, ಬಿ.ಎಸ್.ಚೌಗಲಾ ಇದ್ದರು. ಭಜನಾ ಕಲಾವಿದರನ್ನು ಸನ್ಮಾನಿಸಲಾಯಿತು. ಭರತ ಕಲಾಚಂದ್ರ ಸ್ವಾಗತಿಸಿದರು. ಸುಜಾತಾ ಮಗದುಮ್ಮ ನಿರೂಪಿಸಿ, ವಂದಿಸಿದರು.