ಸಂಡೂರು: ಚೆಸ್ ವಿದ್ಯಾರ್ಥಿಗಳ ಮಾನಸಿಕ ಆತ್ಮಸ್ಥೈರ್ಯ ಹೆಚ್ಚುಸುತ್ತದೆ ಎಂದು ಜಿಪಂ ಮಾಜಿ ಸದಸ್ಯ ಟಿ.ಲಕ್ಷ್ಮಣ ಹೇಳಿದರು. ತಾಲೂಕಿನ ವಿಠಲಾಪುರ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ಬಳ್ಳಾರಿ ಜಿಲ್ಲಾ ಮಟ್ಟದ ಚೆಸ್ ಟೂರ್ನಾಮೆಂಟ್ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಚೆಸ್ ವಿದ್ಯಾರ್ಥಿಗಳ ಕೌಶಲ, ಸೃಜನಶೀಲ, ಮಿದುಳಿನ ವಿಕಸನಕ್ಕೆ ಅನುಕೂಲವಾಗುವುದರಿಂದ ವಿಭಿನ್ನವಾಗಿ ಯೋಚಿಸಲು ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು ಸಾಧ್ಯವಾಗುತ್ತದೆ ಎಂದರು. ಗ್ರಾಪಂ ಅಧ್ಯಕ್ಷ ಎಂ.ವಿ.ರಮೇಶ ಮಾತನಾಡಿ, 2024ರಲ್ಲಿ ಗುಕೇಶ್ ಅವರ ಚೆಸ್ ವಿಶ್ವಚಾಂಪಿಯನ್ ಆದರು. ಅದೇ ರೀತಿಯಾಗಿ ನೀವು ಸಹ ರಾಷ್ಟ್ರ-ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎಂದರು.
ಪ್ರಾಂಶುಪಾಲ ಡಾ.ಯರ‌್ರೆಪ್ಪ , ಈ ಚೆಸ್ ಚಾಂಪಿಯನ್ ಶೀಪ್ ಸಂಯೋಜಕ ನಾಗರಾಜ, ಬಳ್ಳಾರಿ ಚೇಸ್ ಅಸೋಸಿಯೇಷನ್ ಅಧ್ಯಕ್ಷ ವಿರೂಪಾಕ್ಷಯ್ಯ, ತಾಲೂಕು ಅಧ್ಯಕ್ಷ ಜಗದೀಶ, ಗ್ರಾಪಂ ಸದಸ್ಯರಾದ ಮಹಾಂತೇಶ, ಧನಂಜಯ್ಯ, ಗ್ರಾಮಸ್ಥಾರಾದ ಕೆ.ತಿಪ್ಪೇಸ್ವಾಮಿ, ಡಿ.ಉಮೇಶ ಇದ್ದರು. ಗಾದಿಲಿಂಗಪ್ಪ, ಕೆ.ತಿಪ್ಪೇಸ್ವಾಮಿ, ಡಾ.ರಾಮಾಂಜಿನಿ ನಿರ್ವಹಿಸಿದರು.