filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 133.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಏ.6ರಿಂದ ಶಿವಭಜನಾ ಸಪ್ತಾಹ

ಚಿಕ್ಕೋಡಿ: ತಾಲೂಕಿನ ಜೋಡಕುರಳಿ ಗ್ರಾಮದ ಸಿದಾಟಛಿರೂಢ ಮಠದಲ್ಲಿ ಶಿವಭಜನಾ ಸಪ್ತಾಹ ಕಾರ್ಯಕ್ರಮ ಏ. 6ರಿಂದ 12ರವರೆಗೆ ನಡೆಯಲಿದೆ ಎಂದು ಚಿದ್ಘನಾನಂದ ಭಾರತಿ ಸ್ವಾಮೀಜಿ ಹೇಳಿದರು.

ಶ್ರೀಮಠದ ಸಭಾಗಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ. 6ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶಿವಭಜನಾ ಸಪ್ತಾಹ ಆರಂಭವಾಗಿ ಸತತ 7 ದಿನಗಳ ಕಾಲ ಬೆಳಗ್ಗೆ 6 ರಿಂದ ರಾತ್ರಿ 9ರ ವರೆಗೆ ಶಿವನಾಮ ಸ್ಮರಣೆ ಭಜನಾ ಸಪ್ತಾಹ ನಡೆಯಲಿದೆ. ಏ. 12ರಂದು ಸಂಜೆ ಶ್ರೀ ಸಿದಾಟಛಿರೂಢ ಮಹಾರಾಜರ ರಥೋತ್ಸವ ಜರುಗುತ್ತದೆ. ಏ. 13ರಂದು ಸಂಜೆ ಕೌದಿ ಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ. ಪ್ರತಿ ದಿನ ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.