ಯಕ್ಸಂಬಾ ಪಟ್ಟಣದಲ್ಲಿ ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಸಂಜಯ ಪಾಟೀಲ, ವಿಕಾಸ ಪಾಟೀಲ, ಜಯಾನಂದ ಜಾಧವ, ಕಲ್ಲಪ್ಪ ಜಾಧವ, ಸಿದ್ರಾಮ ಗಡದೆ, ಲಕ್ಷ್ಮಣ ಕಬಾಡೆ, ಅಪ್ಪಾಸಾಹೇಬ ಜೊಲ್ಲೆ, ಮನೋಜ ಖಿಚಡೆ ಎಂಪಿ ಟ್ರೋಫಿ ಕಬಡ್ಡಿ ಪಂದ್ಯಾವಳಿಯ ಕರಪತ್ರ ಬಿಡಗುಡೆಗೊಳಿಸಿದರು. 
ಜಿಲ್ಲೆ

7ರಿಂದ ಎಂಪಿ ಟ್ರೋಫಿ ಕಬಡ್ಡಿ ಟೂರ್ನಿ

ಪ್ರಶಾಂತ ಹೂಗಾರ

ಚಿಕ್ಕೋಡಿ ಗ್ರಾಮೀಣ: ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಜ.7, 8ರಂದು ಯಕ್ಸಂಬಾದ ಜೊಲ್ಲೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಣ್ಣಾಸಾಹೇಬ ಜೊಲ್ಲೆ ಎಂಪಿ ಟ್ರೋಫಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಬಸವಜ್ಯೋತಿ ಯೂತ್ ೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ತಿಳಿಸಿದರು.

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪಂದ್ಯಾವಳಿ ಆಯೋಜಿಸಿದ್ದು, ಪ್ರತಿ ಕ್ಷೇತ್ರದಲ್ಲೂ 100ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ತಂಡ ಭಾಗವಹಿಸಲಿವೆ. ಪಂದ್ಯಾವಳಿಯಲ್ಲಿ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.

ಪ್ರಥಮ 21,000 ರೂ., ದ್ವಿತೀಯ 15,000 ರೂ., ತತಿಯ, ಚತುರ್ಥ ತಲಾ 7,500 ರೂ. ನೀಡಲಾಗುವುದು. ವಿಜೇತ ನಾಲ್ಕು ತಂಡಗಳನ್ನು ಚಿಕ್ಕೋಡಿ ಲೋಕಸಭಾ ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಿ ಎಂಟು ಕ್ಷೇತ್ರಗಳಿಂದ 32 ತಂಡ ಪಾಲ್ಗೊಳ್ಳಲಿವೆ. ಅಲ್ಲಿಯೂ ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು.

ಪ್ರಥಮ 51,000 ರೂ., ದ್ವಿತೀಯ 31,000 ರೂ., ತೃತೀಯ, ಚತುರ್ಥ ತಲಾ 15,000 ರೂ. ಬಹುಮಾನ ನೀಡಲಾಗುವುದು ಎಂದು ಹೇಳಿದರು. ಜ್ಯೋತಿಪ್ರಸಾದ ಜೊಲ್ಲೆ, ಸಂಜಯ ಪಾಟೀಲ, ವಿಕಾಸ ಪಾಟೀಲ, ಜಯಾನಂದ ಜಾಧವ, ಕಲ್ಲಪ್ಪ ಜಾಧವ, ಸಿದ್ರಾಮ ಗಡದೆ, ಲಕ್ಷ್ಮಣ ಕಬಾಡೆ ಇತರರಿದ್ದರು.