ಜಿಲ್ಲೆ

28ರಿಂದ ಕಾದರವಳ್ಳಿ ವೀರಭದ್ರೇಶ್ವರ ಜಾತ್ರೆ

ರಾಘವೇಂದ್ರಗೌಡ ಭೀ ಪಾಟೀಲ್

ಎಂ.ಕೆ.ಹುಬ್ಬಳ್ಳಿ: ಚನ್ನಮ್ಮನ ಕಿತ್ತೂರು ತಾಲೂಕಿನ ಕಾದರವಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ಗುಗ್ಗುಳ, ಸಸ ಕಾರ್ಯಕ್ರಮ ಏ.28ರಿಂದ ಮೇ 3ರ ವರೆಗೆ ಜರುಗಲಿದೆ.

ಏ.28ರಂದು ಹಳೆ ಕಾದರವಳ್ಳಿ ಗ್ರಾಮದ ಶಿವ-ಪಾರ್ವತಿ ಕಲ್ಯಾಣ ಮಂಟಪ ಉದ್ಘಾಟನೆ. ಏ.29ರಂದು ಬೆಳಗ್ಗೆ 7 ಗಂಟೆಗೆ ಸಾಮೂಹಿಕ ಸಸ ಮತ್ತು ಗುಗ್ಗುಳ ಹಾಗೂ ವೀರಭದ್ರೇಶ್ವರ ರಥದ ಕಳಸಾರೋಹಣ. ಏ.30ರಂದು ಬೆಳಗ್ಗೆ 9 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದ ದೀಪಸ್ತಂಭ ಉದ್ಘಾಟನೆ, ಸಂಜೆ 5 ಗಂಟೆಗೆ ಹಳೆ ಕಾದರವಳ್ಳಿಯಲ್ಲಿ ಐದು ಹೆಜ್ಜೆ ರಥೋತ್ಸವ ನೆರವೇರಲಿದೆ.

ಮೇ 1ರಂದು ಮಧ್ಯಾಹ್ನ 3 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪೇಟೆ ಓಣಿಯವರೆಗೆ ರಥೋತ್ಸವ. ಮೇ 2ರಂದು ಮಧ್ಯಾಹ್ನ 3 ಗಂಟೆಗೆ ಪೇಟೆ ಓಣಿಯಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ರಥೋತ್ಸವ ಜರುಗುವುದು. ಮೇ 3ರಂದು ಕಳಸ ಇಳಿಸುವುದು ಹಾಗೂ ತಳದ ದೇವರಿಗೆ ಪೂಜಾ ಕಾರ್ಯ ನೆರವೇರಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ. ಗುಗ್ಗುಳ ಮತ್ತು ಸಸ ಮಾಡಿಸುವವರು ಏ.15ರೊಳಗೆ ಹೆಸರು ನೋಂದಾಯಿಸಬೇಕು. ಮಾಹಿತಿಗಾಗಿ ಮೊ. 6360506212, ಸಂಪರ್ಕಿಸಲು ಕೋರಲಾಗಿದೆ.