ಚನ್ನವೀರ ಶಿವಯೋಗಿ 
ಜಿಲ್ಲೆ

16 ರಿಂದ ಚನ್ನವೀರ ಶಿವಯೋಗಿಗಳ ಪುಣ್ಯಾರಾಧನೆ

ಗಿರೀಶ ಸಗರ

ಮಹಾಲಿಂಗಪುರ : ಸ್ಥಳೀಯ ಚನ್ನವೀರ ಶಿವಯೋಗಿಗಳ ಆಶ್ರಮದಲ್ಲಿ ಆ.16 ಹಾಗೂ 17 ರಂದು ಮಹಾಯೋಗಿ ಚನ್ನವೀರ ಶಿವಯೋಗಿಗಳ 32ನೇ ಪುಣ್ಯಾರಾಧನೆ ಕಾರ್ಯಕ್ರಮ ಜರುಗಲಿದೆ.

ಆ.16 ರಂದು ರಾತ್ರಿ 8ಕ್ಕೆ ಶಿವಾನುಭವಗೋಷ್ಠಿ ಹಾಗೂ ಮಹಾಪ್ರಸಾದ ನಂತರ ಶಿವಭಜನೆ ಬೆಳಗಿನ ಜಾವದವರೆಗೆ ನಡೆಯಲಿದೆ.

ಆ.17 ರಂದು ಬೆಳಗ್ಗೆ 8ಕ್ಕೆ ಚನ್ನವೀರ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, 9 ಗಂಟೆಗೆ ಸಾಮೂಹಿಕ ಜಪಯಜ್ಞ ನಂತರ ತೇರದಾಳ ವಿರಕ್ತಮಠದ ಶಿವಕುಮಾರ ದೇವರ ಪಾದಪೂಜೆ ನೆರವೇರುವುದು.

ಶಿವಕುಮಾರ ದೇವರು ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ನಿವೃತ್ತ ನ್ಯಾಯಾಧೀಶ ಮಹಾಂತಗೌಡ ಬಿರಾದಾರ ಅಧ್ಯಕ್ಷತೆ ವಹಿಸುವರು. ಬನಹಟ್ಟಿಯ ಶಿವಶರಣೆ ಅಶ್ವಿನಿ ಗೆದ್ದೆಪ್ಪನವರ ಅತಿಥಿಗಳಾಗಿ ಆಗಮಿಸುವರು.

ಶಾಸಕರಾದ ಸಿದ್ದು ಸವದಿ, ಜಗದೀಶ ಗುಡಗುಂಟಿಮಠ ಹಾಗೂ ಯೋಗಾಶ್ರಮಕ್ಕೆ ನಿರಂತರ ಅನ್ನಪ್ರಸಾದ ಸೇವೆ ಸಲ್ಲಿಸುತ್ತಿರುವ ಗಣ್ಯರಾದ ಮುರಿಗೆಪ್ಪ ದುಗ್ಗಾಣಿ, ಶಿವಪ್ಪ ರಾಮೋಜಿ, ಮಹಾದೇವಪ್ಪ ಕಂಪುನವರ, ಬಸಪ್ಪ ಹಿಪ್ಪರಗಿ, ಬಸಪ್ಪ ತಾಳಿಕೋಟಿ, ಬಸವರಾಜ ಪಾಶ್ಚಾಪುರ, ದಾನಪ್ಪ ಶಿರೋಳ, ರವಿರಾಜ ಘಟ್ನಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು ಚನ್ನವೀರ ಶಿವಯೋಗಿಗಳ ಆಶ್ರಮದ ಟ್ರಸ್ಟ್ ಕಮಿಟಿ ಪ್ರಕಟಣೆ ತಿಳಿಸಿದೆ.