ರಾಯಬಾಗ: ನವರಾತ್ರಿ ಉತ್ಸವ ಅಂಗವಾಗಿ ಪಟ್ಟಣದ ಅಂಬಾಭವಾನಿಗೆ ಅ.15 ರಿಂದ 24ರ ವರೆಗೆ ನಿತ್ಯ ವಿಶೇಷ ಪೂಜೆ ನೆರವೇರಲಿದೆ. 15ರಂದು ಕುಳಿತಿರುವ ರೂಪದ ದೇವಿಗೆ ದೇಸಾಯಿ (ಸರಕಾರ) ಮನೆತನದವರಿಂದ ಪೂಜೆ, 16 ರಂದು ಹಂಸದ ಮೇಲೆ ಕುಳಿತ ರೂಪದ ದೇವಿಗೆ ಚವ್ಹಾಣ, ಪವಾರ, ಶಿಂಧೆ, ಪಿತಾಂಬರೆ, ಶೇಲಾರ ಮನೆತನದವರಿಂದ ಪೂಜೆ,17 ರಂದು ಚಿಗರಿ ಮೇಲೆ ಕುಳಿತಿರುವ ದೇವಿಗೆ ಕೋಳಿ ಮತ್ತು ತರಾಳ ಮನೆತನದವರಿಂದ ಪೂಜೆ ಮತ್ತು ಆರತಿ, 18 ರಂದು ಸಂಬಳ ಮತ್ತು ಚೌಟಗಿ ದೇವಿಗೆ ಗೊಂಧಳಿ ಮನೆತನದವರಿಂದ ಪೂಜೆ ಮತ್ತು ಮಹಾಪ್ರಸಾದ ಜರುಗಲಿದೆ.
19 ರಂದು ಸಿಂಹಾಸನದ ಮೇಲೆ ಆಸೀನ ದೇವಿಗೆ ಗಾವಂಕಾಮಗಾರ ಪಾಟೀಲ, ದೇಸಾಯಿ, ಕೆಂಪಟ್ಟಿ ಮನೆತನದವರಿಂದ ಪೂಜೆ, 20 ರಂದು ಅಂಬಾರಿ ಮೇಲೆ ಕುಳಿತ ದೇವಿಗೆ ಸಂಕಪಾಳ, ಮಂಡಕೆ, ಲಟ್ಟೆ ಮನೆತನದವರಿಂದ ಪೂಜೆ, 21 ರಂದು ಸರಸ್ವತಿ ರೂಪದ ದೇವಿಗೆ ಇನಾಮದಾರ, ಕುಲಕರ್ಣಿ, ಹವಾಲ್ದಾರ, ಜೋಶಿ, ತೋರೊ, ದೇಶಪಾಂಡೆ ಮನೆತನದವರಿಂದ ಪೂಜೆ, 22 ರಂದು ಹುಲಿ ಮೇಲೆ ಕುಳಿತ ದೇವಿಗೆ ವಿವೇಕರಾವ ಪಾಟೀಲ, ಪ್ರತಾಪರಾವ ಪಾಟೀಲ ಮನೆತನದವರಿಂದ ಹಾಗೂ ನಾಯಿಕ, ಪೂಜೇರಿ ಗುಡಮೆ, ಕೋಚೆರಿ, ಬಾವಚಿ, ಹಳಬರ, ಸನದಿ ಮನೆತನದವರಿಂದ ಆರತಿ ಮತ್ತು ಪೂಜೆ, 23 ರಂದು ಮಹಿಷಾಸುರ ಮರ್ದಿನಿ ರೂಪದ ದೇವಿಗೆ ಹವಾಲ್ದಾರ ಮನೆತನದವರಿಂದ ಪೂಜೆ ಹಾಗೂ ಮಹಾಪ್ರಸಾದ, 24 ರಂದು ದಸರಾ ಉತ್ಸವದ ಕೊನೆಯ ದಿನ ಗ್ರಾಮಸ್ಥರು ಮತ್ತು ಸಾರ್ವಜನಿಕರಿಂದ ಆರತಿ ಮತ್ತು ಮಹಾಪೂಜೆ, ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ಅಂಬಾಭವಾನಿ ನವರಾತ್ರಿ ಉತ್ಸವ ಕಮಿಟಿ ಪ್ರಕಟಣೆ ತಿಳಿಸಿದೆ.