ಜಿಲ್ಲೆ

108 ದಂಪತಿಗಳಿಂದ ಅಗ್ನಿಹೋತ್ರ

ರಾಘವೇಂದ್ರಗೌಡ ಭೀ ಪಾಟೀಲ್

ರಾಮದುರ್ಗ: ವಿಶ್ವ ಅಗ್ನಿಹೋತ್ರ ದಿನದ ಪ್ರಯುಕ್ತ ಪಟ್ಟಣದ ಹಲಗತ್ತಿ ಬೈಪಾಸ್ ರಸ್ತೆಯಲ್ಲಿರುವ ಆರಿಬೆಂಚಿ ಕಲ್ಯಾಣ ಮಂಟಪದಲ್ಲಿ 108 ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಿಸರ್ಗ ತಜ್ಞ ಹಣಮಂತ ಮಳಲಿ ಮಾತನಾಡಿ, ವಾತಾವರಣದಲ್ಲಿ ದುಷ್ಪರಿಣಾಮ ಬೀರುವ ವಿಕಿರಣಗಳನ್ನು ನ್ಯೂಟ್ರಿಲೆಸ್ ಮಾಡುವ ಸಾಮರ್ಥ್ಯ ಅಗ್ನಿಹೋತ್ರ ಹೊಂದಿದೆ.

ಅದರಲ್ಲಿ ಬಳಸುವ ತಾಮ್ರದ ಪಿರ‌್ಯಾಮಿಡ್ ವಾತಾವಣದಲ್ಲಿ ಸಕಾರಾತ್ಮಕ ಕಂಪನ ಸಷ್ಟಿಸುವ ಜತೆಗೆ ಅಗ್ನಿಹೋತ್ರಕ್ಕೆ ಬಳಕೆ ಮಾಡುವ ವನಸ್ಪತಿಗಳಿಂದ ವಾಯು ಮಾಲಿನ್ಯ ತಡೆಯಲು ಸಹಕಾರಿಯಾಗಿದೆ ಎಂದರು. ಅಧ್ಯಕ್ಷ ಸಂಗಮೇಶ ಉದಪುಡಿ ಮಾತನಾಡಿದರು. ರಾಮದುರ್ಗ ತಾಲೂಕಿನ ಇಬ್ಬರು ಉರಗ ರಕ್ಷಕರು ಹಾಗೂ 6 ಗೋರಕ್ಷಕರನ್ನು ಸತ್ಕರಿಸಲಾಯಿತು.

ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಡಾ.ಕೆ.ವಿ. ಪಾಟೀಲ, ಡಾ.ಬಿ.ಎಲ್. ಸಂಕನಗೌಡ್ರ, ಎಸ್.ವಿ. ಹೊನ್ನುಂಗರ, ಯೋಗ ಗುರು ರೇವಪ್ಪ ಕೋಟೂರ, ಸಂಘಟಕರಾದ ವಿಶ್ವನಾಥ ದಿವಟಗಿ, ಬಸವರಾಜ ಆರಿಬೆಂಚಿ, ವಿನಾಯಕ ಗಂಗಣ್ಣವರ, ದರ್ಶನ ಮಲಗಾವಿ, ಪ್ರದೀಪ ಮುಖಾರಿ, ಸುಹಾಸ ಆರಿಬೆಂಚಿ, ಪ್ರಸನ್ ರಾವಳ, ಹೇಮಂತ ಮುಗಳಿ, ಷಣ್ಮುಖ ಮುಗಳಿ ಇತರರಿದ್ದರು.