ಶೃಂಗೇರಿ: ಕಪ್ಪೆ ಒಂದು ಉಭಯ ವಾಸಿ ಗುಂಪಿಗೆ ಸೇರಿದ ಬಹುತೇಕ ಮಾಂಸಾಹಾರಿ ಜೀವಿ. ಇವುಗಳು ಸಾಮಾನ್ಯವಾಗಿ ನೀರಿನಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆಗಳು ಗೊದಮಪಟ್ಟೆ ಮರಿಗಳಾಗಿ ಬಳಿಕ ಕಪ್ಪೆ ಮರಿಗಳಾಗಿ ರೂಪಾಂತರಗೊಳ್ಳುತ್ತದೆ ಎಂದು ಮೆಟಾಸ್ಟ್ರಿಂಗ್ ೌಂಡೇಷನ್‌ನ ಸಿಇಒ ಡಾ.ರವಿ ಚೆಲ್ಲಂ ಹೇಳಿದರು.
ಹೊಸದೇವರ ಹಡ್ಲಿನ ಅಜ್ರಸಾ ಕಲಿಕಾ ಹಾಗೂ ಸಂಶೋಧನಾ ಕೇಂದ್ರ, ಮೆಟಾಸ್ಟ್ರಿಂಗ್ ೌಂಡೇಷನ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಭಾನುವಾರ ಮಲೆನಾಡಿನ ಮರಾಗ್ರಂಥಿ ಕಪ್ಪೆ ಕುರಿತು ಮಾತನಾಡಿ, ಬಹಳಷ್ಟು ಕಪ್ಪೆಗಳು ಜಿಗಿಯಬಹುದು.ಅದರ ಕಾಲಿನ ಮೂಳೆಗಳು ಸೇರಿ ದೊಡ್ಡ ಮೂಳೆಗಳಿವೆ. ಕಪ್ಪೆಗಳಲ್ಲೂ ಹಲವಾರು ಪ್ರಬೇಧಗಳಿದ್ದು ಅವುಗಳು ಬೇರೆ ಬೇರೆ ಚಲನೆಗಳನ್ನು ಅಳವಡಿಸಿಕೊಂಡಿದೆ. ಜಿಗಿಯುವುದು, ಈಜುವುದು, ಬಿಲತೋಡುವುದು, ತೇಲುವುದನ್ನು ಅವುಗಳು ಒಳಗೊಂಡಿವೆ. ಎಲ್ಲ ಕಶೇರುಕಗಳಲ್ಲಿ ಕಪ್ಪೆಗಳನ್ನು ವಿಶೇಷವಾಗಿ ಜಿಗಿಯುವ ಶಕ್ತಿ ಇರುವ ಪ್ರಾಣಿಗಳು ಎಂದು ಗುರುತಿಸಲಾಗಿದೆ ಎಂದರು.
ವಿವಿಧ ರಾಜ್ಯಗಳ 20 ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸುಹಾಸ್ ಮತ್ತು ಪ್ರೇಮ್‌ಕುಮಾರ್ ನಿರ್ದೇಶಿಸಿದ ಲಿಟಲ್ ಪ್ಲಾನೇಟ್-ಟೇಲ್ಸ್ ಆ್ ಪ್ರಾಗ್ಸ್ ಸಾಕ್ಷ್ಯಚಿತ್ರ ಪದರ್ಶಿಸಲಾಯಿತು. ಸೃಷ್ಟಿ ಮಣಿಪಾಲ್ ಟ್ರಸ್ಟ್ ಪ್ರಾಧ್ಯಾಪಕ ಡಾ.ಗುರುರಾಜ, ಅಜ್ರಸ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಅಭಿಜಿತ್, ಪದಾಧಿಕಾರಿಗಳಾದ ಶಶಾಂಕ್, ವಿಶ್ವಜಿತ್ ಇದ್ದರು.