ಜಿಲ್ಲೆ

ಗೋವಾಕ್ಕೆ ರವಾನೆಯಾಗುತ್ತಿದ್ದ 42 ಕಪ್ಪೆಗಳ ರಕ್ಷಣೆ

Uttara Kannada - Subash Hegde

ಕಾರವಾರ: ಗೋವಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಜೀವಂತ ಕಪ್ಪೆಗಳನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.

ಕಾರವಾರದಿಂದ ಗೋವಾಕ್ಕೆ ತೆರಳುತ್ತಿದ್ದ ಶಾಂತಾದುರ್ಗಾ ಬಸ್ ನ್ನು ಕಾಳಿ‌ ಸೇತುವೆ ಬಳಿ ತಡೆದು ಪರಿಶೀಲಿಸಿದಾಗ ಕಪ್ಪೆಗಳಿದ್ದ ಚೀಲ ಸಿಕ್ಕಿದೆ.

ಅದರಲ್ಲಿ 42 ಕಪ್ಪೆಗಳಿದ್ದವು. ಬಸ್, ಚಾಲಕ ಹಾಗೂ ನಿರ್ವಾಹಕನನ್ನು ವಶಕ್ಕೆ ಪಡೆಯಲಾಗಿದೆ. ಕಾರವಾರ ಆರ್ ಎಫ್ ಒ ವಿಶ್ವನಾಥ ಎ.ವಿ.ನೇತೃತ್ವದಲ್ಲಿ ಸಿಬ್ಬಂದಿ ದಾಳಿ‌ ನಡೆಸಿದ್ದರು.

ಗೋವಾದಲ್ಲಿ ಕಪ್ಪೆಗಳಿಗೆ ಭಾರಿ ಬೇಡಿಕೆ ಇದೆ. ಜಂಪಿಂಗ್ ಚಿಕನ್ ಎಂದು ಅದನ್ನು ರೆಸಾರ್ಟ್ ಗಳಲ್ಲಿ ನೀಡಲಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ಪಟ್ಟಿಯ ಶೆಡ್ಯುಲ್ಡ್ ಎ ಪಟ್ಟಿಯಲ್ಲಿರುವ ಬುಲ್ ಫ್ರಾಗ್ ಗಳಿಗೆ ಗೋವಾದಲ್ಲಿ ಸಾಕಷ್ಟು ಬೇಡಿಕೆ ಇದೆ. ಒಂದು ಕಪ್ಪೆಯನ್ನು 350 ರೂ.ಗೆ ಮಾರಾಟ ಮಾಡಲಾಗುತ್ತದೆ. ಗೋವಾದಲ್ಲಿ ವಿದೇಶಿಗರು ಹಾಗೂ ದೇಶೀಯರೂ ಅದನ್ನು ಇಷ್ಟಪಡುತ್ತಾರೆ

.