ಜಿಲ್ಲೆ

ಹೆಸ್ಕಾಂ ವಿರುದ್ದ ರೈತರ ಪ್ರತಿಭಟನೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಕೇಂದ್ರ ಸರಕಾರ ಕೃಷಿ ಪಂಪ್ ಸೈಟ್ ಗಳಿಗೆ ಆಧಾರ ನಂಬರ್ ಜೋಡಣೆ ಮಾಡುವುದು ತಕ್ಷಣ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಲ್ಲಿನ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಹೆಸ್ಕಾಂ ಆವರಣದಲ್ಲಿಯೇ ಗ್ಯಾಸ್ ಹಚ್ಚಿ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಪಂಪ್ ಸೈಟ್ ಗಳಿಗೆ ಕಳೆದ 7 ಅಕ್ಟೋಬರ್ 2023 ರಿಂದ ಜಾರಿ ಮಾಡಿರುವ ಕಾನೂನು ರದ್ದು ಮಾಡಿ ಹಿಂದಿನ ರೈತರಿಗೆ ವಿದ್ಯುತ್ ಪರಿವರ್ತಕ ಕಂಬ ವಾಯರ್ ಇತರೆ ಉಪಕರಣಗಳನ್ನು ಉಚಿತವಾಗಿ‌ ಹೆಸ್ಕಾಂ ಸರಬರಾಜು ಮಾಡಿ ಸಮರ್ಪಕ ವಿದ್ಯುತ್ ನೀಡಬೇಕು. ಮನೆ ಬಳಕೆಗೆ 200 ಯುನಿಟ್ ಉಚಿತ ವಿದ್ಯುತ್ ಜಾರಿ ಮಾಡಿರುವ ಸರಕಾರವು‌ ಹೆಚ್ಚಿನ ಯುನಿಟ್ ದರವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಸೋಲಾರ್ ಸಂಪರ್ಕ‌ ಹೊಂದುವ ಪಂಪ್ ಸೈಟ್ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಆದೇಶವನ್ನು ಕೈ ಬಿಟ್ಟು ನಗರ ಮತ್ತು ಹಳ್ಳಿಹಳಲ್ಲಿನ ತಾರತಮ್ಯ ನೀತಿ ಮಾಡದೆ ಸಮಾನ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು‌.

ರೈತ ಮುಖಂಡರಾದ ರಾಜು ಮೊರವೆ, ಭೀಮಶಿ ಗದಾಡಿ, ರಮೇಶ ಮಡಿವಾಳರ, ಶಂಕರ ಬೇವಿನಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.