ಜಿಲ್ಲೆ

ಫ್ರೆಂಡ್​ಷಿಪ್​ ಡೇ: ಬದುಕಿನ ದಿಕ್ಕು ಬದಲಿಸಿದ ಅರ್ಜಿ

Mandara
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನು ಮತ್ತು ಜಯಶ್ರೀ 5ನೇ ಕ್ಲಾಸ್​ನಿಂದಲೇ ಸ್ನೇಹಿತೆಯರು. ಪಿಯುಸಿ ಮುಗಿದ ನಂತರ ಧಾರವಾಡದಲ್ಲಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಅರ್ಜಿ ಹಾಕೋಣ ಎಂದು ಹೇಳಿದವಳು ಜಯಶ್ರೀ. ನನಗೆ ಧಾರವಾಡಕ್ಕೆ ಹೋಗಿ ಅರ್ಜಿ ತರುವ ಆರ್ಥಿಕ ಪರಿಸ್ಥಿತಿ ಇರಲಿಲ್ಲ. ಜಯಶ್ರೀನೇ ಅವರ ಭಾವನವರ ಮೂಲಕ ತರಿಸಿ ಕೊಟ್ಟಳು. ತುಂಬಿದ ಅರ್ಜಿಯನ್ನು ಕೊಟ್ಟು ಬರಲು ಕೂಡ ಈಕೆಯೇ ನೆರವಾದಳು. ಇಬ್ಬರೂ ತರಬೇತಿಗೆ ಆಯ್ಕೆಯಾಗಿ ಶಿಕ್ಷಕರಾಗಿ ನೇಮಕವಾದೆವು. ಅಂದು ತಾನು ಅರ್ಜಿ ಹಾಕುವಾಗ ಜಯಶ್ರೀ ನೆರವಾಗದಿದ್ದರೆ ನಾನು ಎಲ್ಲಿರುತ್ತಿದ್ದೇನೋ ಗೊತ್ತಿಲ್ಲ. ನನ್ನನ್ನು ಶಿಕ್ಷಕಿಯನ್ನಾಗಿ ಮಾಡಿ ನನ್ನ ಜೀವನದ ದಿಕ್ಕು ಬದಲಿಸಿದಾಕೆ ಈಕೆ.

| ಪ್ರಭಾವತಿ ಎಸ್ ವೈ ಶಿಕ್ಷಕಿ. ಬೆಳಗಾವಿ