ಜಿಲ್ಲೆ

ಫ್ರೆಂಡ್​ಷಿಪ್​ ಡೇ: ಎಲ್ಲವನ್ನೂ ಕಳೆದುಕೊಂಡು ಸೋತಾಗ...

Mandara
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಕಳೆದ ಮಾರ್ಚ್ ತಿಂಗಳ ಕೊನೆಯ ದಿನಗಳು ನನ್ನ ಪಾಲಿನ ಕರಾಳ ದಿನಗಳಾದವು. ನನ್ನ ಆರೋಗ್ಯ ಕ್ಷೀಣಿಸಿ, ಹಾಸಿಗೆ ಹಿಡಿದೆ. ಹಾಗೆಯೇ ನಾನು ಸಾವಿಗೆ ತುಂಬಾ ಹತ್ತಿರವಾಗಿದ್ದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಜತೆಯಲ್ಲಿ ಯಾರೂ ಇರಲಿಲ್ಲ. ಇನ್ನೇನು ಸಾವು ಸಮೀಪಿಸುತ್ತಿದೆ ಎನ್ನಿಸಿತ್ತು. ಆ ಕ್ಷಣದಲ್ಲಿ ನನ್ನ ಜತೆಯಾದವ ಗೆಳೆಯ. ನನ್ನಲ್ಲಿ ಆತ್ಮವಿಶ್ವಾಸ ತುಂಬಿದ. ಸದಾ ನನ್ನನ್ನು ನಗಿಸುತ್ತಿರಲು ಪ್ರಯತ್ನಿಸಿದ. ಅವನ ಚೈತನ್ಯದಾಯಕ ಮಾತು ನನ್ನ ಜೀವ ಉಳಿಸಿದೆ. ನನ್ನ ನೋವನ್ನು ಮರೆಸುತಿದೆ.

| ಮನೋಹರ ಕುಲಕರ್ಣಿ ಬೀದರ್