ತಾಳಿಕೋಟೆ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 
ಜಿಲ್ಲೆ

ಸೌಹಾರ್ದದ ಸಂಕೇತ

Vijayapura - Desk - Gurappa Lokuri

ತಾಳಿಕೋಟೆ: ಪಟ್ಟಣದಲ್ಲಿ ಮುಸ್ಲಿಮರು ಸೋಮವಾರ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆ ಈದ್ಗಾ ಮೈದಾನಕ್ಕೆ ತೆರಳಿದ ನೂರಾರು ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಬಳಿಕ ಡಾ. ಮಿನಹಾಜುದ್ದೀನ್ ಖಾಜಿ ಮಾತನಾಡಿ, ರಂಜಾನ ಹಬ್ಬವು ಮುಸ್ಲಿಮರ ಪವಿತ್ರ ಹಬ್ಬವಾಗಿದೆ. ಈ ಹಬ್ಬವು ಸಹೋದರತೆ ಮತ್ತು ಸಾಮರಸ್ಯ ಬೆಳೆಸುವಲ್ಲಿ ಸಹಕಾರಿಯಾಗಿದೆ. ಸಮುದಾಯದವರು ಶಾಂತಿ, ಸಹನೆ ಜತೆಗೆ ಭಾತೃತ್ವದ ಗುಣ ಬೆಳೆಸಿಕೊಳ್ಳಬೇಕು. ಪರೋಪಕಾರದ ಉದಾತ್ತ ಗುಣಗಳನ್ನು ಜೀವನದುದ್ದಕ್ಕೂ ಪಾಲಿಸಬೇಕು. ಸಮಾಜದಲ್ಲಿರುವ ಬಡ ನಿರ್ಗತಿಕ ಹಾಗೂ ದುರ್ಬಲರ ಸಹಾಯಕ್ಕಾಗಿ ಮುಂದಾಗಬೇಕು. ಅವರ ಸೇವೆಯಿಂದ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ನೇತೃತ್ವ ವಹಿಸಿದ್ದರು.

ಈದ್ಗಾ ಕಮಿಟಿ ಅಧ್ಯಕ್ಷ ಕೆ.ಎಂ. ಡೋಣಿ, ಉಪಾಧ್ಯಕ್ಷ ಅಬ್ದುಲ್ ರಜಾಕ್ ಮನಗೂಳಿ, ಕಾರ್ಯದರ್ಶಿ ಅಬ್ದುಲ್ ರೆಹಮಾನ ಎಕೀನ್, ಜಾಮೀಯಾ ಮಸೀದಿ ಅಧ್ಯಕ್ಷ ಖಾಜಾ ಹುಸೇನ್ ಸಗರ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹೀದ್ ನಮಾಜಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಚಾಂದಹುಸೇನ್ ಖಾಂಜಾದೆ, ಗಣ್ಯರಾದ ಗನಿಸಾಬ ಲಾಹೋರಿ, ಸೈಯದ್ ಸಿಯುದ್ದೀನ್ ಖಾಜಿ, ಅಲ್ಲಾಭಕ್ಷ ನಮಾಜಕಟ್ಟಿ, ಸಿಕಂದರ ವಠಾರ, ಎ.ಎಸ್. ನಮಾಜಕಟ್ಟಿ, ಅಬ್ದುಲ್ ಸತ್ತಾರ ಅವಟಿ, ರೋಶನ ಡೋಣಿ, ನಿರಂಜನಶಾ ಮಕಾಂದಾರ, ಇಬ್ರಾಹಿಂ ಮನ್ಸೂರ್, ಶಮಶುದ್ದೀನ್ ನಾಲಬಂದ, ಎಂ.ಎ. ಮೇತ್ರಿ, ಮೆಹಬೂಬಸಾ ಮಕಾಂದಾರ, ಡಾ.ಎ.ಎ. ನಾಲಬಂದ, ಡಾ. ನಜೀರ್ ಕೋಳ್ಯಾಳ, ಹಸನಸಾಬ ಮನಗೂಳಿ ಇತರರಿದ್ದರು.