ವಿಜಯವಾಣಿ ಸುದ್ದಿಜಾಲ ಉಡುಪಿ
ಉದ್ಯಾವರದ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್ ಸರ್ಕಲ್ (ಯುಎಫ್ಸಿ) ವತಿಯಿಂದ ಆಗಸ್ಟ್ 15ರಂದು ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ ಜಯದೀಪ ಪೂಜಾರಿ, (621 ಅಂಕ), 6ನೇ ರ್ಯಾಂಕ್ ಗಳಿಸಿದ ರಿಹಾ ಮೆಲನಿ ಡಿಸೋಜಾ (620 ಅಂಕ ) ಮತ್ತು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್ ಗಳಿಸಿದ ದೃಶಿತಾ ಎಚ್. ಪುತ್ರನ್ (591 ಅಂಕ), 8ನೇ ರ್ಯಾಂಕ್ ಗಳಿಸಿದ ಮಹಮ್ಮದ್ ರಿಝಾನ್ (593 ಅಂಕ) ಅನುಪಸ್ಥಿತಿಯಲ್ಲಿ ಅವರ ತಂದೆ ಮಹಮ್ಮದ್ ಆಸೀಫ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕ ಅಬ್ದುಲ್ ಜಲೀಲ್ ಸಾಹೇಬ್, ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್ನ ಧರ್ಮಗುರು ರೆ.ಫಾ.ಅನಿಲ್ ಡಿಸೋಜಾ ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ನ ಅಧ್ಯಕ್ಷ ಹರಿಪ್ರಸಾದ್ ರೈ ಅವರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.
ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್, ಅಧ್ಯಕ್ಷ ಗಿರೀಶ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ, ಕೋಶಾಧಿಕಾರಿ ಸತೀಶ ಡಿ. ಸಾಲಿಯಾನ್, ನಿರ್ದೇಶಕರಾದ ಚಂದ್ರಾವತಿ ಎಸ್. ಭಂಡಾರಿ, ಶರತಕುಮಾರ್, ಯು.ಪದ್ಮನಾಭ ಕಾಮತ, ಮಾಜಿ ಉಪಾಧ್ಯಕ್ಷೆ ಸುಗಂಧಿ ಶೇಖರ ಇತರರು ಉಪಸ್ಥಿತರಿದ್ದರು.