ಹಾವೇರಿ: ಸ್ನೇಹಿತರ ಸಹವಾಸದಿಂದ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಇಜಾರಿಲಕಮಾಪುರದಲ್ಲಿ ಗುರುವಾರ ನಡೆದಿದೆ.
ವಿನಾಯಕ ಸುರೇಶ ಕಂಬಾಳಿಮಠ (34) ಮೃತ ವ್ಯಕ್ತಿ.
ಈತ ಸ್ನೇಹಿತರ ಜತೆ ಸೇರಿ ವಿಪರೀತ ಮದ್ಯ ಸೇವಿಸುತ್ತಿದ್ದ. ಇದರಿಂದ ಹೊರಬರಲಾಗದೆ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.